ಕರಾವಳಿ

ಉಡುಪಿಯಲ್ಲಿ ಬಟ್ಟೆ ಖರೀದಿಗೆ ತೆರಳಿದ ಮಹಿಳೆ ನಾಪತ್ತೆ

Pinterest LinkedIn Tumblr

ಉಡುಪಿ: ಬಟ್ಟೆ ಖರೀದಿಗೆಂದು ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಮೂಡನಿಡಂಬೂರು ಗ್ರಾಮದ ಪಂದುಬೆಟ್ಟು ಎಂಬಲ್ಲಿ ಯಾಸೀನ್ ಎಂಬವರ ಹೆಂಡತಿ ಆಫ್ರೀನ್ (24 ವರ್ಷ) ಎಂಬುವವರು ಮೇ 29 ರಂದು ಉಡುಪಿಗೆ ಬಟ್ಟೆ ಖರೀದಿಗೆಂದು ತೆರಳಿದವರು ವಾಪಾಸು ಬಂದಿಲ್ಲ. ಇವರು 142 ಸೆಂ.ಮೀ. ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಉರ್ದು ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.