ಕರಾವಳಿ

ಬಹುಭಾಷಾ ಪರಿಣಿತ ಹರಿದಾಸ ಜಯಾನಂದ ಕುಮಾರ್‌ ಅವರಿಗೆ‌ ಅಭಿನಂದನೆ

Pinterest LinkedIn Tumblr

ಮಂಗಳೂರು : ಹರಿಕೀರ್ತನೆಯ ಜತೆಜತೆಗೆ ಭಜನಾ ಸಂಸ್ಕೃತಿಯನ್ನು ಜನಪ್ರಿಯಗೊಳಿಸುತ್ತಿರುವ ಬಹುಭಾಷಾ ಪರಿಣತ ಶ್ರೀ ಜಯಾನಂದ ಕುಮಾರರವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು‌ ಇತ್ತೀಚೆಗೆ ಸನ್ಮಾನಿಸಿ ಗೌರವಿಸಿದರು.

ಶ್ರೀಯುತರು 60 ಕ್ಷೇತ್ರಗಳಲ್ಲಿ ಹರಿಕಥಾ ಸಂಕೀರ್ತನೆಯನ್ನು ನಡೆಸಿದ ಸಮಾರೋಪ ಸಮಾರಂಭದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು‌ ಇಲ್ಲಿನ ಶ್ರೀ ಗುರುದೇವಾನಂದ ಸ್ವಾಮೀಜೀ. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ, ಹರಿಕಥಾ ಪರಿಷತ್ತಿನ‌ ಅಧ್ಯಕ್ಷ ‘ದೇವಕೀತನಯ’ ಮಹಾಬಲಶೆಟ್ಟಿ, ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯದ ಪ್ರೊ| ಎಂ. ಬಿ. ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.

Comments are closed.