ಮಂಗಳೂರು : ಪದವು ಪಶ್ಚಿಮ ಹಾಗೂ ಪದವು ಸೆಂಟ್ರಲ್ ವಾರ್ಡು ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಶಕ್ತಿನಗರ ಪ್ರದೇಶದ 10 ಅಂಗನವಾಡಿ ಶಾಲೆಗಳ ಸುಮಾರು 210ಕ್ಕೂ ಅಧಿಕ ಮಕ್ಕಳಿಗೆ ಉಚಿತ ಕೊಡೆ, ಬ್ಯಾಗು, ಪ್ಲೇಟು ಮತ್ತು ಇನ್ನಿತರ ಕಲಿಕಾ ಸಾಮಾಗ್ರಿ ಗಳನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ.ಆರ್.ಲೋಬೊ ಅವರು ಇಂದು ಶಕ್ತಿನಗರದ ತುಳುವರ ಕೂಟ ಕಛೇರಿಯಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಸಮಾಜದ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕುವಂತಾಗಬೇಕು. ಎಲ್ಲಾ ಮಕ್ಕಳು ವಿದ್ಯಾವಂತ ರಾಗಿ ಬಾಳಬೇಕು. ಈ ಪ್ರದೇಶದಲ್ಲಿ ಹೆಚ್ಚಿನ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರಾಗಿರವುದರಿಂದ, ಈ ರೀತಿಯ ಶಾಲಾ ಮಕ್ಕಳ ಸಾಮಾಗ್ರಿಗಳನ್ನು ವಿತರಿಸುವುದರಿಂದ ಅವರ ಹೆತ್ತವರಿಗೂ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮನಪಾ ಸದಸ್ಯರಾದ ಆಖಿಲಾ ಆಳ್ವ, ಅಬ್ದುಲ್ ಅಜೀಜ್, ವಾರ್ಡು ಅಧ್ಯಕ್ಷ ಉಮೇಶ್ ದಂಡಕೇರಿ, ಪಕ್ಷದ ಪ್ರಮುಖರಾದ ಟಿ.ಕೆ. ಸುಧೀರ್, ವಿಜಂಯ ಬಾಬು, ತುಕಾರಾಮ, ಆಶಾಲತಾ, ಶೇಖರ ಪೂಜಾರಿ, ಯಶವಂತ ಪ್ರಭು, ರವೀಂದ್ರ ನಾಯಕ್, ಶೈಲೇಶ್ ಆಳ್ವ, ಪ್ರಸಾದ್, ಜಲಜಾಕ್ಷಿ, ವಿನ್ನಿ ಡಿ.ಸೋಜ, ಮರಿಯಾ ರೇಖಾ, ಚಿತ್ರಾ, ಅಭಿಷೇಕ್, ಲಿಖಿತ್ ಮೊದಲಾದವರು ಉಪಸ್ಥಿತಿರಿದ್ದರು.
Comments are closed.