ಕರಾವಳಿ

ವಿವಿ ತುಳು ಪೀಠದ ಸಲಹಾ ಸಮಿತಿ ಸದಸ್ಯರಾಗಿ ಪಮ್ಮಿ ಕೊಡಿಯಾಲ್ ಬೈಲ್ ಆಯ್ಕೆ

Pinterest LinkedIn Tumblr

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಲಹಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಪ್ರವೀಣ್ ಕುಮಾರ ಕೊಡಿಯಾಲ್ ಬೈಲ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕುಲಪತಿ ಅವರ ಅನುಮೋದನೆಯೊಂದಿಗೆ ನೂತನ ಸಮತಿ ರಚನೆಗೊಂಡಿದೆ.

ಚಿತ್ರ ನಿರ್ಮಾಪಕ ಹಾಗೂ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ( ರಿ)ದ ಅಧ್ಯಕ್ಷರಾಗಿರುವ ಪ್ರವೀಣ್ ಕುಮಾರ್ (ಪಮ್ಮಿ ಕೊಡಿಯಾಲ್ ಬೈಲ್) ಕೊಡಿಯಾಲ್ ಬೈಲ್ ಅವರು ಹಲವಾರು ಸಾಂಸ್ಕ್ರಿತಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

Comments are closed.