ಕರಾವಳಿ

ಸುರತ್ಕಲ್‌ ತಂಪು ಪಾನೀಯ ಘಟಕಕ್ಕೆ ನುಗ್ಗಿ ದರೋಡೆ ; ಇಬ್ಬರ ಸೆರೆ

Pinterest LinkedIn Tumblr

 

ಮಂಗಳೂರು, ಜೂನ್. 28: ಸುರತ್ಕಲ್‌ನಲ್ಲಿ ಇತ್ತೀಚಿಗೆ ನಡೆದ ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಾಲ್ಕು ದಿನಗಳ ಹಿಂದೆ ಸುರತ್ಕಲ್‌ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳಾದ ಅನಿಲ್ ಹೆಗ್ಡೆ ಮತ್ತು ಮುಜೀಬ್ ಎಂದು ಹೆಸರಿಸಲಾಗಿದೆ.

ಸುರತ್ಕಲ್ ಇಡ್ಯದ ರೈಲ್ವೆ ಸ್ಟೇಶನ್ ಬಳಿ ತಂಪು ಪಾನೀಯ ಘಟಕವೊಂದನ್ನು ಡ್ಯಾನಿ ಆಯಂಟನಿ ಪೌಲ್ ಎಂಬವರು ಹೊಂದಿದ್ದು, ಇವರು ಜೂ.22ರಂದು ವ್ಯವಹಾರ ನಿಮಿತ್ತ ದುಬೈಗೆ ಪಯಣಿಸಿದ್ದರು. ಈ ಮಧ್ಯೆ ಜೂ.25ರಂದು ಅನಿಲ್ ಹೆಗ್ಡೆ, ಅನ್ಸಿಲ್, ಮುಜೀಬ್, ನಾರಾಯಣ, ಉದಯ ಮತ್ತಿತರರು ತಂಪು ಪಾನೀಯ ಘಟಕಕ್ಕೆ ನುಗ್ಗಿ ಸಿಸಿಟಿವಿ ಡಿವಿಆರ್, ಹಾರ್ಡ್ ಡಿಸ್ಕ್, ಮೂರು ಚಿನ್ನದ ಉಂಗುರ, 1.21 ಲಕ್ಷ ರೂ. ನಗದು, ಮೂರು ಖಾಲಿ ಚೆಕ್ ಹಾಗೂ ಮತ್ತಿತರ ದಾಖಲೆ ಪತ್ರಗಳನ್ನು ದೋಚಿದ್ದರು.

ಈ ಬಗ್ಗೆ ಮ್ಯಾನೇಜರ್ ಮ್ಯಾಕ್ಸಿಂ ನೊರೊನ್ಹಾ ಮಾಲಕರಿಗೆ ಮಾಹಿತಿ ನೀಡಿದ್ದಲ್ಲದೆ, ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅನಿಲ್ ಹೆಗ್ಡೆ ಮತ್ತು ಮುಜೀಬ್‌ ನನ್ನು ಬಂಧಿಸಿದ್ದು, ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments are closed.