ಮಂಗಳೂರು : ಪದವು, ಬಿಕರ್ಣಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆಯ ಆಂಗ್ಲ ಮಾಧ್ಯಮದ ಒಂದನೇ ತರಗತಿಯ ಉದ್ಘಾಟನೆ ಮತ್ತು ಮಕ್ಕಳಿಗೆ ಬರೆಯುವ ಪುಸ್ತಕ, ಬ್ಯಾಗ್, ಸಮವಸ್ತ್ರ, ಕೊಡೆ, ಚಪ್ಪಲಿ ಇತ್ಯಾದಿಗಳನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಜಯಲತಾ ಅಮೀನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಮೇಶ್ ಕಂಡೆಟ್ಟು, ಜೊತೆ ಕಾರ್ಯದರ್ಶಿ ದೇವದಾಸ ಮರೋಳಿ, ಕೋಗ್ನಿ ಸೆಂಟರ್ ಸಂಸ್ಥೆಯ ಸದಸ್ಯ ವಿಷ್ಣುವರ್ಧನ್ ಹಾಗೂ ಇರ್ಫಾನ್, ಮಾಜಿ ಎಸ್ ಡಿಎಂಸಿ ಅಧ್ಯಕ್ಷ ಸಂಜೀವಣ್ಣ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಶರತ್ ಕುಮಾರ್, ಗಿರೀಶ್ ಕೊಟ್ಟಾರಿ, ಶೈಲಜಾ ಸುರೇಶ್, ಅರಂಧುತಿ, ನಾಗರಾಜ್ ದಾನಿಗಳಾದ ಟಿ ನಾಗರಾಜ್, ಶರತ್, ಶಕುಂತಳಾ, ಯೋಗೀಶ್ ಶೆಣೈ ಉಪಸ್ಥಿತರಿದ್ದರು.
Comments are closed.