ಕರಾವಳಿ

ಸಣ್ಣ ಮಕ್ಕಳ ಸಿಟ್ಟಿಗೆ ಮೂಲ ಕಾರಣ ಬಲ್ಲಿರಾ…?

Pinterest LinkedIn Tumblr

ಮಕ್ಕಳು ಕಿರಿಕಿರಿ ಮಾಡುವುದು ಸಾಮಾನ್ಯ. ಆದರೆ ಪ್ರತಿ ಮಾತಿಗೂ ಕಿರಿಕಿರಿ ಮಾಡುವುದು, ಕೈಗೆ ಸಿಕ್ಕವನ್ನೆಲ್ಲಾ ಎಸೆಯುವ ಮಕ್ಕಳ ಸಿಟ್ಟನ್ನು ನಿಯಂತ್ರಣಗೊಳಿಸುವುದು ತುಂಬಾ ಕಷ್ಟ. ಇಂತಹ ಸಂದರ್ಭದಲ್ಲಿ ಪಾಲಕರು ಮನಶಾಸ್ತ್ರಜ್ಞರಿಗೆ ತೋರಿಸುವುದು ಸೂಕ್ತ.

ಮಕ್ಕಳ ಈ ಗಲಾಟೆಗೆ ಎರಡು ಕಾರಣಗಳಿವೆ:
ಮಕ್ಕಳು ವಾಸವಾಗಿರುವ ವಾತಾವರಣ
ಪಾಲಕರ ವರ್ತನೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು. 14-25 ವರ್ಷ ವಯಸ್ಸಿನ ಮಕ್ಕಳ ಕೋಪಕ್ಕೆ ಮುಖ್ಯ ಕಾರಣ ಪಾಲಕರ ವರ್ತನೆಯೂ ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸುತ್ತದೆ. ಹಾಗಾಗಿ ಪೋಷಕರು ಮಕ್ಕಳನ್ನು ಬೆಳೆಸುವ ರೀತಿ, ಅವರ ಜೊತೆಗಿನ ಒಡನಾಟ ಉತ್ತಮವಾಗಿರಬೇಕು. ಹಾಗಾಗಿ, ಮಕ್ಕಳ ಗಲಾಟೆ, ಸಿಟ್ಟನ್ನು ಕಡಿಮೆ ಗೊಳಿಸಲು ಪಾಲಕರಿಗೆ ಕೆಲವೊಂದು ಕಿವಿಮಾತು.

ಪಾಲಕರಾಗಿ ಕೋಪ ನಿಭಾಯಿಸಿ :
ಮಕ್ಕಳು ಕೋಪಗೊಂಡಾಗ ಪಾಲಕರು ಕೋಪಗೊಳ್ಳುವುದು ಸಾಮಾನ್ಯ. ಆದರೆ ಪಾಲಕರು ಕೋಪವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಇಬ್ಬರೂ ಕೋಪಗೊಂಡರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಮಕ್ಕಳ ಮಾತನ್ನು ಪೂರ್ಣವಾಗಿ ಕೇಳಿ. ಸಿಟ್ಟು ಕಮ್ಮಿಯಾದ ಮೇಲೆ ಪ್ರೀತಿಯಿಂದ ಅವರಿಗೆ ಬುದ್ಧಿ ಹೇಳಿ. ಬಿಡುವಿನ ಸಮಯದಲ್ಲಿ. ಕ್ರಿಕೆಟ್, ಬ್ಯಾಡ್ಮಿಂಟನ್, ಕರಾಟೆ, ಈಜು ಸೇರಿದಂತೆ ಯಾವುದಾದರೊಂದು ಚಟುವಟಿಕೆಯಲ್ಲಿ ಸೇರಿಸಿ.

ಹೆಚ್ಚು ಸಮಯ ಮಕ್ಕಳೊಡನೆ ಕಳೆಯಿರಿ :
ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಾಗ, ಅವರ ಎಷ್ಟೋ ಗೌಪ್ಯ ಪ್ರತಿಭೆಗಳ ಬಗ್ಗೆ ತಿಳಿಯುತ್ತದೆ. ಇದರಿಂದ ಮಕ್ಕಳ ಬೆಳವಣಿಗೆ ಸುಲಭವಾಗುತ್ತದೆ.

ಪಿಕ್ ನಿಕ್ ಪ್ಲಾನ್ ಮಾಡಿ :
ಬಿಡುವಿನ ಅಥವಾ ರಜಾ ಸಮಯದಲ್ಲಿ ಪಿಕ್ನಿಕ್ ಪ್ಲಾನ್ ಮಾಡಿ. ಆಗ ಆತ್ಮೀಯತೆ ಜೊತೆಗೆ, ತಿಳುವಳಿಕೆ ಸಿಗಲು ಸಾಧ್ಯವಾಗುತ್ತದೆ. ಉತ್ತಮ ಒಡನಾಟ ಬೆಳೆಯಲು ಸಹಕಾರಿ.

ಆತ್ಮವಿಶ್ವಾಸ ತುಂಬಿ :
ಸುಖ -ದುಃಖ ಎರಡರಲ್ಲೂ ನಾನು ನಿನ್ನ ಜೊತೆಗಿರುತ್ತೇನೆ ಎಂಬ ಭರವಸೆ ನೀಡುವ ಮೂಲಕ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಹೆಚ್ಚಿಸಿ.

Comments are closed.