ಕರಾವಳಿ

ಕತ್ತಿಯಿಂದ ಕಡಿದು ಉಡುಪಿ ಪೆರ್ಡೂರಿನಲ್ಲಿ ಬಸ್ ಕಂಡಕ್ಟರ್’ನ ಬರ್ಬರ ಕೊಲೆ

Pinterest LinkedIn Tumblr

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿ ಪೆರ್ಡೂರು, ಬೈರಂಪಳ್ಳಿ ಎಂಬಲ್ಲಿ ಖಾಸಗಿ ಬಸ್ ಕಂಡಕ್ಟರ್ ಒಬ್ಬರನ್ನು ಕೊಲೆಗೈದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಇಲ್ಲಿನ ನಿವಾಸಿ ಪ್ರಶಾಂತ್ ಪೂಜಾರಿ (38) ಕೊಲೆಯಾದವರು‌.

ಗುರುವಾರ ರಾತ್ರಿ 12 ಗಂಟೆ ಪ್ರಶಾಂತ್ ಅವರ ಮನೆಗೆ ಬಂದ ಅಪರಿಚಿತರಿಬ್ಬರು ಪ್ರಶಾಂತ್ ಅವರೋಡನೆ ಜಗಳ ಮಾಡಿ ಮನೆಯ ಆವರಣದಲ್ಲೇ ಕತ್ತಿಯಿಂದ ಕುಯ್ದು ಪ್ರಶಾಂತ್ ಅವರನ್ನು ಕೊಲೆ ಮಾಡಲಾಗಿದೆ. ಆರೋಪಿಗಳು ಯಾರು ಎಂದು ತಿಳಿದು ಬಂದಿಲ್ಲ,ಮೇಲ್ನೋಟಕ್ಕೆ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ.

ಹತ್ಯೆಯಾದ ಪ್ರಶಾಂತ್ ಅವರಿಗೆ ಪರಿಚಯದವರೇ ಆದವರು ಕೊಲೆ ಮಾಡಿರಬಹುದು. ತನಿಖೆ ಪ್ರಗತಿಯಲ್ಲಿದ್ದೂ, ಆರೋಪಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ . ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Comments are closed.