ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನ ಆದಿಮಾಯೆ ದೇವಸ್ಥಾನದ ಮುಂಭಾಗದ ಜೆರೋಮ್ ಮೊಂತೆರೋ ಮನೆಯ ಬಳಿ ಆ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಚರಂಡಿ ನಿರ್ಮಾಣ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸೂಚನೆಯಂತೆ ಚಾಲನೆ ನೀಡಲಾಯಿತು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆದಿಮಾಯೆ ದೇವಸ್ಥಾನದ ಪ್ರಧಾನ ಅರ್ಚಕರಾದ ದಯಾನಂದ ಪಾತ್ರಿ, ಬಿಜೆಪಿ ಮುಖಂಡರಾದ ಜೆ ಸುರೇಂದ್ರ, ನಾರಾಯಣ ರೈ, ರಾಮಪ್ರಸಾದ್ ಶೆಟ್ಟಿ, ಮೋಹನದಾಸ್ ಅಡ್ಯಂತಾಯ, ಶ್ಯಾಮಪ್ರಸಾದ್ ಕಡೆಕಾರ್, ರಮೇಶ್ ಶೆಟ್ಟಿ, ಸುನೀಲ್, ತೃಪ್ತಿ, ವಸಂತಿ ಟೀಚರ್, ಸವಿತಾ ಶೆಟ್ಟಿ, ದೀಪಕ್, ಹರೀಶ್ ಬಜಾಲ್, ಲೋಹಿತ್ ಶೆಟ್ಟಿ, ಜೋನ್ ಪಿಂಟೋ ಮುಂತಾದವರು ಉಪಸ್ಥಿತರಿದ್ದರು.
Comments are closed.