ಕರಾವಳಿ

ಶಾಸಕ ಕಾಮತ್‌ರಿಂದ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯ

Pinterest LinkedIn Tumblr

ಮಂಗಳೂರು : ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಸೋಮವಾರ ಮುಸ್ಲಿಮರು ದೇಶಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು. ಈ ವೇಳೆ ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು,ಕರಾವಳಿಯ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಶುಭಾಶಯ ಕೋರಿದರು.

ಈದ್ ಹಬ್ಬದ ಶುಭಾಶಯಗಳು, ಈದ್ ತ್ಯಾಗದ ಸಂಕೇತವಾಗಿದೆ. ಈದ್’ನ ಜುಹಾ ಪ್ರೀತಿ, ಭ್ರಾತೃತ್ವ ಮತ್ತು ಮಾನವೀಯತೆಯ ಸೇವೆಯನ್ನು ಸಂಕೇತಿಸುತ್ತದೆ. ನಮ್ಮೊಳಗಿನ ಕೆಡುಕನ್ನು ತ್ಯಜಿಸಿ, ಒಳಿತಿನೆಡೆಗೆ ಮುನ್ನುಗ್ಗುವಂತಹ ತ್ಯಾಗೋಜ್ವಲವಾದ ಜೀವನ ನಡೆಸುವಂತಹ ಗುಣಗಳು ಎಲ್ಲರಲ್ಲೂ ಬೆಳೆಯಬೇಕು ಎಂದು ಹೇಳಿದರು.

ಬಕ್ರೀದ್ ಹಬ್ಬವು ತ್ಯಾಗ – ಬಲಿದಾನ, ಧರ್ಮ, ಭಾತೃತ್ವ ಸಹೋದರತೆ, ಅನ್ಯೋನ್ಯತೆಗಳ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ನಮ್ಮ ಸಂಯೋಜಿತ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಸಾರ್ವತ್ರಿಕ ಮೌಲ್ಯಗಳಿಗೆ ನಾವು ಬದ್ಧರಾಗೋಣ. ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಸಾರುತ್ತಾ ಬಕ್ರೀದ್ ಹಬ್ಬದ ಸಂದೇಶವನ್ನು ಎಲ್ಲೆಡೆ ಸಾರೋಣ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

Comments are closed.