ಕರಾವಳಿ

ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ವರ್ಗ: ನೂತನ ಎಡಿಸಿ ಬಿ. ಸದಾಶಿವ ಪ್ರಭು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಬಿ. ಸದಾಶಿವ ಪ್ರಭು ಅವರನ್ನು ನೇಮಿಸಿ ಸರಕಾರ ಆದೇಶ ನೀಡಿದೆ. ಸದಾಶಿವ ಪ್ರಭು ಅವರು ಈ ಹಿಂದೆ ಕಂದಾಯ ಇಲಾಕೆ ಬೆಂಗಳೂರಿನಲ್ಲಿ ಸರಕಾರದ ಉಪ ಕಾರ್ಯದರ್ಶಿ ಆಗಿದ್ದರು. ಕೆ.ಎ.ಎಸ್. ಅಧಿಕಾರಿಯಾಗಿರುವ ಇವರು ಅದಕ್ಕೂ ಮೊದಲು ಕರಾವಳಿ ಭಾಗದಲ್ಲಿ ಇವರು ಕರ್ತವ್ಯ ನಿರ್ವಹಿಸಿದ್ದು ಮಂಗಳೂರಿನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಯಾಗಿದ್ದರು.

ಉಡುಪಿಯಲ್ಲಿ ಪ್ರಸ್ತುತ ಕೆ. ವಿದ್ಯಾ ಕುಮಾರಿ ಅಪರ ಜಿಲ್ಲಾಧಿಕಾರಿಯಾಗಿದ್ದು ಅವರನ್ನು ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದ್ರಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ.

Comments are closed.