ಕರಾವಳಿ

ವೋಟರ್ ಐಡಿಯಲ್ಲಿ ತಿದ್ದುಪಡಿ ಮಾಡಲು ನಿಮಗೇ ಅವಕಾಶ…

Pinterest LinkedIn Tumblr

ವಿಶೇಶ ವರದಿ- ಮತದಾರರ ಪಟ್ಟಿಯಲ್ಲಿನ ನಿಮ್ಮ ಭಾವಚಿತ್ರ ಹಿಂದೆ ಯಾವಾಗಲೂ ತೆಗೆದ ಹಳೆಯ ಕಪ್ಪು ಬಿಳುಪು ಚಿತ್ರವಾಗಿದ್ದು, ನಿಮಗೇ ಗುರುತು ಹಿಡಿಯಲು ಕಷ್ಟವಾಗಿದೆಯೇ, ನಿಮ್ಮ ಇತ್ತೀಚಿನ ಬಣ್ಣದ ಭಾವಚಿತ್ರ ಸೇರ್ಪಡೆ ಮಾಡಿಕೊಳ್ಳುವ ಇಚ್ಚೆಯಿದೆಯೇ, ಮತದಾರರ ಪಟ್ಟಿಯಲ್ಲಿ ನಿಮ್ಮ ಜನ್ಮ ದಿನಾಂಕ ಅಥವಾ ವಿಳಾಸ ತಪ್ಪಾಗಿ ದಾಖಲಾಗಿದೆಯೇ ಆಥವಾ ಹಿಂದೆ ನೀಡಿದ ವಿಳಾಸದಿಂದ ಹೊಸ ವಿಳಾಸಕ್ಕೆ ಬದಲಾಗಿದ್ದೀರಾ.. ಈ ನಿಮ್ಮ ಎಲ್ಲಾ ಸಮಸ್ಯೆ ಗೊಂದಲಗಳಿಗೆ ಈಗ ಸೂಕ್ತ ಪರಿಹಾರ ಇದೆ, ಇದಕ್ಕಾಗಿ ನೀವು, ನಿಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಯಾವುದೇ ಸರಕಾರಿ ಕಚೇರಿಯಲ್ಲಿ ಕ್ಯೂ ನಿಲ್ಲಬೇಕಿಲ್ಲ, ನೀವೇ ನಿಮ್ಮ ಮನೆಯಲ್ಲಿಯೇ ಕುಳಿತು ಈ ಎಲ್ಲಾ ಬದಲಾವಣೆ ಮಾಡಿಕೊಳ್ಳಲು ಭಾರತೀಯ ಚುನಾವಣ ಆಯೋಗ ಅವಕಾಶ ಮಾಡಿಕೊಟ್ಟಿದೆ.

(ಸಾಂದರ್ಭಿಕ ಚಿತ್ರ)

ಇನ್ನೇಕೆ ತಡ, ನೀವು ಮಾಡಬೇಕಿರುವುದು ಇಷ್ಟೇ, ನಿಮ್ಮ ಮೊಬೈಲ್ನ ಪ್ಲೇ ಸ್ಟೋರ್ನಲ್ಲಿ ವೋಟರ್ ಹೆಲ್ಪ್ ಲೈನ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ, ಅದರಲ್ಲಿ ಬರುವ ಸೂಚನೆಗಳನ್ನು ಪಾಲಿಸಿ, ನೆಕ್ಟ್ಸ್ ಒತ್ತಿ, ನಂತರ ಬರುವ ಸ್ಕ್ರೀನ್ನಲ್ಲಿ ಇವಿಪಿ ಎಂಬುದನ್ನು ಪ್ರೆಸ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ನೀಡಿ, ನಂತರ ಬರುವ ಒಟಿಪಿ ದಾಖಲಿಸಿದಾಗ, ನಿಮ್ಮ ವೋಟರ್ ಐಡಿಯ ಸಂಖ್ಯೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು ಸೂಚನೆ ಬರುತದೆ, ಇದನ್ನು ಪಾಲಿಸಿದ ನಂತರ ಬರುವ ಸ್ಕ್ರೀನ್ನಲ್ಲಿ ವಿವರಗಳನ್ನು ನಮೂದಿಸಿ, ಮತದಾರರ ಪಟ್ಟಿಯಲ್ಲಿನ ನಿಮ್ಮ ಹೆಸರನ್ನು ಹುಡುಕಿದಾಗ, ನಿಮ್ಮ ಭಾವಚಿತ್ರ ಸಹಿತ ಮಾಹಿತಿ ಬರಲಿದೆ.

ಈ ಭಾವಚಿತ್ರ್ರ ಸಹಿತ ಮಾಹಿತಿಯಲ್ಲಿ ನಿಮ್ಮ ಭಾವಚಿತ್ರ, ಹೆಸರು, ವಯಸ್ಸು, ಲಿಂಗ, ತಂದೆ/ಪತಿ ಹೆಸರು, ವಿಳಾಸ ಇವುಗಳ ಮುಂದೆ ಪೆನ್ಸಿಲ್ನ ಐಕಾನ್ ಇದ್ದು, ನೀವು ಯಾವುದನ್ನು ಬದಲಾವಣೆ ಮಾಡಬೇಕೋ ಅದನ್ನು ಒತ್ತಿದಾಗ, ಆ ಬದಲಾವಣೆಗೆ ಪೂರಕವಾದ ಸಂಬಂದಪಟ್ಟ ದಾಖಲೆಗಳನ್ನು ಅಪ್ ಲೋಡ್ ಮಾಡಲು ಕೋರುತ್ತದೆ, ಸಂಬಂದಪಟ್ಟ ದಾಖಲೆಗಳನ್ನು ಅಪ್ ಲೋಡ್ ಮಾಡಿದಲ್ಲಿ, ಮತದಾರರ ಗುರುತು ಚೀಟಿಯಲ್ಲಿ ನೀವು ಕೋರಿದ ಬದಲಾವಣೆ ಸಾಧ್ಯವಾಗಲಿದೆ.

ಅಲ್ಲದೇ ಮತದಾರರ ಪಟ್ಟಿಯಲ್ಲಿ ನಿಮ್ಮ ಕುಟುಂಬದವರ ಹೆಸರು ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ಮತಗಟ್ಟೆಯಲ್ಲಿ ದಾಖಲಾಗಿದ್ದು, ಮತದಾನ ಮಾಡಲು ಬೇರೆ ಬೇರೆ ಕಡೆ ತೆರಳುವ ಸಮಸ್ಯೆಯಿದ್ದಲ್ಲಿ ಅದಕ್ಕೂ ಪರಿಹಾರವಿದೆ, ಈ ಮೊಬೈಲ್ ಆಪ್ನಲ್ಲಿ ಫ್ಯಾಮಿಲಿ ಗ್ರೂಪಿಂಗ್ಗೆ ಸಹ ಅವಕಾಶ ನೀಡಿದ್ದು, ಬೇರೆ ಬೇರೆ ಮತಗಟ್ಟೆಗಳಲ್ಲಿರುವ ಒಂದೇ ಕುಟುಂಬದ ಸದಸ್ಯರನ್ನು ಒಂದೇ ಮತಗಟ್ಟೆಯಲ್ಲಿ ಒಂದೇ ಭಾಗದಲ್ಲಿ ಸೇರ್ಪಡೆ ಮಾಡಲು ಸಹ ಅವಕಾಶವಿದೆ.

ಭಾರತೀಯ ಚುನಾವಣಾ ಆಯೋಗ, ಮತದಾರರಿಗೆ ನೀಡಿರುವ ಈ ಸದಾವಕಾಶ ಅಕ್ಟೋಬರ್ 15 ರ ವರೆಗೆ ಮಾತ್ರ ದೊರೆಯಲಿದ್ದು, ಆ ನಂತರ ನೀವು ಬದಲಾವಣೆ ಮಾಡಿರುವ ಹೊಸ ವೋಟರ್ ಐಡಿ ಕಾರ್ಡ್ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಮತದಾರರ ಬಹುಕಾಲದ ಬೇಡಿಕೆಯಾದ ತಮ್ಮ ಭಾವಚಿತ್ರ ತಿದ್ದುಪಡಿ ಮತ್ತು ಇತರೆ ತಿದ್ದುಪಡಿಗಳನ್ನು ಮತದಾರರೇ ಮಾಡಿಕೊಳ್ಳಲು ಚುನಾವಣಾ ಆಯೋಗ ಸಿದ್ದಪಡಿಸಿರುವ, ಈ ವೋಟರ್ ಹೆಲ್ಪ್ ಲೈನ್ ಆಪ್ ಅತ್ಯಂತ ಸರಳವಾಗಿದ್ದು, ಬಳಕೆದಾರರ ಸ್ನೇಹಿಯಾಗಿ ರೂಪಿಸಲಾಗಿದೆ. ಈ ಆಪ್ ಬಳಕೆ ಬಗ್ಗೆ ಯಾವುದೇ ಸಮಸ್ಯೆಗಳಿದ್ದಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರ ಮತ್ತು ಎಲ್ಲಾ ತಾಲೂಕುಗಳ ತಹಸೀಲ್ದಾರ್ ಕಚೇರಿಗಳನ್ನು ಸಂಪರ್ಕಿಸಿ, ಅಲ್ಲೂ ಸಹ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಮತ್ತು ಆಪ್ ಬಳಕೆ ಮತ್ತಿತರ ಮಾಹಿತಿಗಾಗಿ 24*7 ಮತದಾರರ ಉಚಿತ ಸಹಾಯವಾಣಿ ಸಂಖ್ಯೆ 1950 ಸಂಪರ್ಕಿಸುದರ ಮೂಲಕ, ಈ ಸದಾವಕಾಶವನ್ನು ಜಿಲ್ಲೆಯ ಎಲ್ಲಾ ಮತದಾರರು ಪಡೆದುಕೊಂಡು ತಮ್ಮ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾ ಚುನಾವಣಾ ಶಾಖೆಯ ಅಧೀಕ್ಷಕ ಸಂಪತ್ ಕುಮಾರ್ ತಿಳಿಸಿದ್ದಾರೆ.

Comments are closed.