ಕುಂದಾಪುರ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆದೂರು ರೈಲ್ವೆ ಟ್ರ್ಯಾಕ್ ಬಳಿ ಅಪರಿಚಿತ ಮಹಿಳೆಯ ಶವವು ಗುರುವಾರ ಮುಂಜಾನೆ ಪತ್ತೆಯಾಗಿದೆ. ಬುಧವಾರ ಮಧ್ಯರಾತ್ರಿ (1 ಗಂಟೆ ಆಸುಪಾಸು) ಸಮಯದಲ್ಲಿ ಮಂಗಳೂರಿನಿಂದ ಗೋವಾದತ್ತ ಸಾಗುವ ನೇತ್ರಾವತಿ ರೈಲು ತೆರಳಿದ ಬಳಿಕ ಈ ಅವಘಡ ನಡೆದಿದ್ದು ಪೊಲಿಸರಿಗೆ 3 ಗಂಟೆ ಸುಮಾರಿಗೆ ಮಾಹಿತಿ ಸಿಕ್ಕಿದೆ.
ಸುಮಾರು 50-55 ವರ್ಷ ಪ್ರಾಯದ ಮಹಿಳೆಯ ಛಿದ್ರಗೊಂಡ ಶವ ದೊರಕಿದ್ದು ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮುಖ ಸಹಿತ ಸಂಪೂರ್ಣ ದೇಹವು ಗುರುತಿಸಲಾಗದಷ್ಟು ಕತ್ತರಿಸಲ್ಪಟ್ತ ಸ್ಥಿತಿಯಲ್ಲಿದ್ದು ಮಹಿಳೆಯ ಪತ್ತೆಗೆ ಪೊಲೀಸರು ತಲೆಕೆಡಿಸಿಕೊಳ್ಳುವಂತಾಗಿದೆ.
ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮಹಿಳೆಯ ಗುರುತು ಪತ್ತೆ ಹಿನ್ನೆಲೆ ತನಿಖೆ ಮುಂದುವರೆಸಿದ್ದಾರೆ. ಸದ್ಯ ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.