ಕರಾವಳಿ

ಕರಾವಳಿಗೆ ಅಪ್ಪಳಿಸಲಿದೆಯೇ ‘ಕ್ಯಾರ್’ ಚಂಡಮಾರುತ?

Pinterest LinkedIn Tumblr

ಬೆಂಗಳೂರು: ಅರಬ್ಭಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಪರಿಣಾಮವಾಗಿ ಚಂಡಮಾರುತವಾಗಿ ಇದು ಸಂಭವಿಸಲಿದೆ. ಇದರಿಂದ ಕರಾವಳೊಯ ದ.ಕ., ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ 48 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

(ಉಪಗ್ರಹ ಆಧಾರಿತ ಚಿತ್ರ)

ಅರಬ್ಭಿ ಸಮುದ್ರ ಪೂರ್ವ ಮಧ್ಯಭಾಗದಲ್ಲಿ ಹುಟ್ಟಿದ ಚಂಡಮಾರುತಕ್ಕೆ ‘ಕ್ಯಾರ್’ ಎಂಬ ಹೆಸರು ನೀಡಲಾಗಿದೆ. ಅ.25ರವರೆಗೆ ಪೂರ್ವ ಮಧ್ಯದ ಮೂಲಕ ಪೂರ್ವ- ಈಶಾನ್ಯದತ್ತ ಚಲಿಸಲಿದ್ದು, ಆ ನಂತರ ಪಶ್ಚಿಮ ಈಶಾನ್ಯದತ್ತ ಸಾಗಿ ಓಮನ್‌ನತ್ತ ಅಪ್ಪಳಿಸುವ ಸಾಧ್ಯತೆಯಿದೆ. ಇದರ ಪರಿಣಾಮ ಮುಂದಿನ ಎರಡು ದಿನ ಕರ್ನಾಟಕ ಕರಾವಳಿ, ಕೊಂಕಣ ಮತ್ತು ಗೋವಾ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆರಂಭದಲ್ಲಿ ಅ.25ರವರೆಗೆ ಪೂರ್ವ ಮಧ್ಯದ ಮೂಲಕ ಪೂರ್ವ- ಈಶಾನ್ಯದತ್ತ ಚಲಿಸಲಿದ್ದು, ಬಳಿಕ ಪಶ್ಚಿಮ ಈಶಾನ್ಯದತ್ತ ಸಾಗಿ ಓಮನ್‌ನತ್ತ ಅಪ್ಪಳಿಸುವ ಸಾಧ್ಯತೆಯಿದೆ. ಮುಂದಿನ ಎರಡು ದಿನ ಕರ್ನಾಟಕ ಕರಾವಳಿ, ಕೊಂಕಣ ಮತ್ತು ಗೋವಾ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Comments are closed.