ಕುಂದಾಪುರ: ದೋಣಿಯಲ್ಲಿ ತೆರಳಿ ಗಾಳ ಹಾಕಿ ಮೀನುಗಾರಿಕೆಗೆ ತೆರಳಿದ್ದ ವೇಳೆ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಗುಜ್ಜಾಡಿ ಗ್ರಾಮದ ನಾಯಕವಾಡಿ ನಿವಾಸಿ ಡೇವಿಡ್ ಕರ್ವಾಲೋ (43) ನಾಪತ್ತೆಯಾದ ಮೀನುಗಾರ.
ಶುಕ್ರವಾರದಂದು ಗುಜ್ಜಾಡಿಯ ಕಳಿಹಿತ್ಲು ಸಮೀಪದ ಹೊಳೆಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ದೋಣಿ ಮಗುಚಿ ಈ ಘಟನೆ ನಡೆದಿದೆ. ಅಗ್ನಿಶಾಮಕದಳ ಹಾಗೂ ಗಂಗೊಳ್ಳಿ ಪೊಲೀಸರು ನಾಪೆತ್ತಯಾದ ಮೀನುಗಾರ ಡೇವಿಡ್ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.