ಉಡುಪಿ: ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಭದ್ರತಾ ಪಡೆ, ಸೇನಾಪಡೆ, ಅರೆ ಸೇನಾಪಡೆ, ಪೊಲೀಸ್ ಪಡೆ, ಅಗ್ನಿ ಶಾಮಕ, ಅರಣ್ಯ ವಿದ್ಯುತ್, ಗೃಹ ರಕ್ಷಕ, ಸಾರಿಗೆ ಮೊದಲಾದ ಸೇವೆಗಳಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ 1000 ಪ.ಜಾತಿ ಅಭ್ಯರ್ಥಿಗಳಿಗೆ ಪ್ರಿ- ಮಿಲಿಟರಿ ತರಬೇತಿಯನ್ನು ಉಚಿತವಾಗಿ ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
(ಸಾಂದರ್ಭಿಕ ಚಿತ್ರ)
ನಿಬಂಧನೆಗಳು: ತರಬೇತಿ ಅವಧಿ ಕನಿಷ್ಟ 2 ತಿಂಗಳು ಹಾಗೂ ಅಭ್ಯರ್ಥಿಯ ವಯಸ್ಸು 17 ರಿಂದ 35 ವರ್ಷಗಳ ಒಳಗಿರಬೇಕು. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿದ್ದು, ಕನಿಷ್ಟ 40 ಅಂಕಗಳನ್ನು ಪಡೆದಿರಬೇಕು. ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿರಬೇಕು ಹಾಗೂ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 5 ಲಕ್ಷ ರೂ. ಒಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನದೊಳಗೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ದೈಹಿಕ ಮತ್ತು ಜ್ಞಾನ ಸಾಮಥ್ರ್ಯ ಆಧಾರಿತ ಭೂ ಸೇನೆ, ವಾಯು ಸೇನೆ, ನೌಕಾ ಸೇನೆ, ಬಿ.ಎಸ್.ಎಫ್, ಸಿ.ಐ.ಎಸ್.ಎಫ್, ಪೊಲೀಸ್, ಸಿ.ಆರ್.ಪಿ.ಎಫ್ ಮೊದಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತರಿರುವ, ಇಲಾಖೆ ನಿಗಧಿಪಡಿಸಿರುವ ದೈಹಿಕ ಸಾಮಥ್ರ್ಯ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. 10 ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು www.sw.kar.nic.in ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ನವೆಂಬರ್ 23 ರ ಒಳಗೆ ಭರ್ತಿ ಮಾಡಿದ ಅರ್ಜಿಯನ್ನು pre.military.petc@gmail.com ಇ-ಮೇಲ್ ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ಇಲಾಖಾ ವೆಬ್ಸೈಟ್ನಿಂದ ಪಡೆಯಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.