ಉಡುಪಿ: ಕರ್ನಾಟಕ ಸರ್ಕಾರದ ಯೋಜನೆ ಅನುಷ್ಟಾನ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸೂಚನೆಯಂತೆ ಉಡುಪಿ ಪ್ರಾದೇಶಿಕ ಸಾರಿಗೆ ಕಛೇರಿ ವ್ಯಾಪ್ತಿಯಲ್ಲಿ ಬರುವ ಉಡುಪಿ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಮತ್ತು ಅಪಘಾತ ರಹಿತವಾಗಿ ಸೇವೆ ಸಲ್ಲಿಸಿರುವ ಮ್ಯಾಕ್ಸಿಕ್ಯಾಬ್,ಬಸ್,ಸರಕು ಸಾಗಣೆ ವಾಹನ,ಟ್ಯಾಕ್ಸಿ ಮತ್ತು ಆಟೋರಿಕ್ಷಾದ ತಲಾ ಇಬ್ಬರು ಚಾಲಕರಂತೆ ಒಟ್ಟು 10 ಚಾಲಕರನ್ನು ಗುರುತಿಸಿ ಪುರಸ್ಕಾರವನ್ನು ನೀಡಲು ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ
(ಸಾಂದರ್ಭಿಕ ಚಿತ್ರ)
ಅರ್ಹತೆಗಳು : ಉಡುಪಿ ಜಿಲ್ಲೆಯ ನಿವಾಸಿ ಆಗಿರಬೇಕು , ಅರ್ಜಿ ಸಲ್ಲಿಸುವ ವಾಹನದ ವರ್ಗ(ಮ್ಯಾಕ್ಸಿಕ್ಯಾಬ್, ಬಸ್, ಸರಕು ಸಾಗಣೆ ವಾಹನ , ಟ್ಯಾಕ್ಸಿ ಅಥವಾ ಆಟೋರಿಕ್ಷಾ ಇದರಲ್ಲಿ ಒಂದು ವರ್ಗವನ್ನು ಮಾತ್ರ ನಮೂದಿಸಿ ಅರ್ಜಿ ಸಲ್ಲಿಸಬೇಕು), ಸಂಬಂಧಿಸಿದ ವಾಹನ ವರ್ಗದ ಚಾಲನಾ ಅನುಜ್ಞಾಪತ್ರ ನೀಡಿದ ನಂತರ 20 ವರ್ಷ ಆಗಿರಬೇಕು ಮತ್ತು ಸಿಂದುತ್ವವಿರಬೇಕು , ಅರ್ಜಿದಾರರಿಗೆ 45 ವರ್ಷ ಮೀರಿರಬೇಕು, ಯಾವುದೇ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿರಬಾರದು, ಯಾವುದೇ ಪೋಲೀಸ್ ಠಾಣೆಯಲ್ಲಿÀ ಪ್ರಕರಣ ದಾಖಲಾಗಿರಬಾರದು.
ಅರ್ಜಿಯೊಂದಿಗೆ ಆಧಾರ್/ಪಡಿತರ ಚೀಟಿ/ವೋಟರ್ ಐಡಿ ಪ್ರತಿ. ಭಾವಚಿತ್ರ ಡಿ.ಎಲ್ ಪ್ರತಿ ಮತ್ತು ಡಿ.ಎಲ್ ಎಕ್ಸ್ಟ್ರಾಕ್ಟ್, ಜನ್ಮ ದಿನಾಂಕದ ಬಗ್ಗೆ ಸೂಕ್ತ ದಾಖಲೆ, ಜಿಲ್ಲಾ ಪೋಲೀಸ್ ಇಲಾಖೆಯಿಂದ ದೃಡೀಕರಣ ಪತ್ರ, ಈ ಎಲ್ಲಾ ಸೂಕ್ತ ದಾಖಲೆಗಳನ್ನು ಗಳನ್ನು ನವೆಂಬರ್ 25 ರೊಳಗೆ ಪ್ರಾದೇಶಿಕ ಸಾರಿಗೆ ಕಚೇರಿ, ಸಾರಿಗೆ ಸೌಧ, ರಜತಾದ್ರಿ, ಮಣಿಪಾಲ ಉಡುಪಿ ಜಿಲ್ಲೆ,576104 ಇವರಿಗೆ ಅರ್ಜಿ ಸಲ್ಲಿಸುವಂತೆ ಸದಸ್ಯ ಕಾರ್ಯದರ್ಶಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ ಇವರ ಪ್ರಕಟಣೆ ತಿಳಿಸಿದೆ.
Comments are closed.