ಕರಾವಳಿ

ಉಡುಪಿಯ ಮೊಬೈಲ್ ಅಂಗಡಿ ಕಳ್ಳತನ; ಮೂವರು ಅಂತರ್ ರಾಜ್ಯ ಕಳ್ಳರ ಬಂಧನ

Pinterest LinkedIn Tumblr

ಉಡುಪಿ: ಮೊಬೈಲ್ ಅಂಗಡಿಯಿಂದ ಮೊಬೈಲ್ ಕಳ್ಳತನ ಮಾಡಿದ ಅಂತರ್ ರಾಜ್ಯ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಡಿಸೆಂಬರ್ 1 ರಂದು ಬಂಧಿಸಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರದ ರಜಾಕ್ ಅಸ್ಲಾಂ ಮುಜಾವರ್ (20), ಕೊಪ್ಪಳ ಜಿಲ್ಲೆಯ ರಾಜಾಸಾಬ್ ನಾಯಕ್, (25), ಮತ್ತು ಬಿಹಾರದ ದೀಪಕ್ ಪ್ರಸಾದ್ ಎಂದು ಗುರುತಿಸಲಾಗಿದೆ.

ನವೆಂಬರ್ 5 ರಂದು ರಾತ್ರಿ ಉಡುಪಿ ನಗರದ ತ್ರೀವೇಣಿ ಜಂಕ್ಷನ್ ಬಳಿ ಇರುವ ಪ್ಲೇ ಜೋನ್ ಎಂಬ ಮೊಬೈಲ್ ಅಂಗಡಿಯಿಂದ ಸುಮಾರು ರೂ. 8,34,990/- ಬೆಲೆಬಾಳುವ ಮೊಬೈಲ್ ಪೋನ್ಗಳು ಹಾಗೂ ನಗದು ಕಳವಾಗಿದ್ದು ಆರೋಪಿಗಳನ್ನು ಡಿಸೆಂಬರ್ 1ರಂದು ಬಂಧಿಸಿದ್ದು ಬಂಧಿತರಿಂದ ಅಂದಾಜು ರೂ. 3 ಲಕ್ಷ ಮೌಲ್ಯದ 16 ಮೊಬೈಲ್, 22 ಸಾವಿರ ನಗದು, ಹಾಗೂ ಕಳವಿಗೆ ಉಯೋಗಿಸಿದ ಒಂದು ಕಬ್ಬಿಣದ ಸ್ಕ್ರೂ ಡ್ರೈವರ್, ಒಂದು ಕಟ್ಟಿಂಗ್ ಪ್ಲೇರ್, ಬೆನ್ನಿಗೆ ಹಾಕುವ ಎರಡು ಬ್ಯಾಗ್, ಮೂಗಿಗೆ ಕಟ್ಟುವ ಒಂದು ಮಾಸ್ಕ್, ತಲೆಗೆ ಹಾಕುವ ಬಟ್ಟೆಯ ಕ್ಯಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಅವರ ಆದೇಶದಂತೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಟಿ.ಆರ್ ಜೈಶಂಕರ್ ಮಾರ್ಗದರ್ಶನದಲ್ಲಿ ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ, ಮಲ್ಪೆ ಠಾಣಾ ಪಿ.ಎಸ್.ಐ ತಿಮ್ಮೇಶ್, ಎಎಸ್ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ರಾಮು ಹೆಗ್ಡೆ ಡಿಸಿಐಬಿ, ರಾಘವೇಂದ್ರ ಡಿಸಿಐಬಿ, ಉಡುಪಿ ನಗರ ಠಾಣೆಯ ಲೋಕೇಶ್, ಬಾಲಕೃಷ್ಣ, ಇಮ್ರಾನ್, ಸಂತೋಷ್ ರಾಥೋಡ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಇದ್ದರು.

Comments are closed.