ಕರಾವಳಿ

ಬ್ರೋಕರ್, ಅನರ್ಹರಿಗೆ ಬ್ರೇಕ್- ಅರ್ಹ ಸಾರ್ವಜನಿಕರ ಮನೆ ಬಾಗಿಲಿಗೇ ಪಿಂಚಣಿ- ಸಚಿವ ಆರ್. ಅಶೋಕ್

Pinterest LinkedIn Tumblr

ಉಡುಪಿ: ವೃದ್ದಾಪ್ಯ ವೇತನ , ವಿಧವಾ ವೇತನದ ಪಿಂಚಣಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸದೇ , ಸರಕಾರದ ವತಿಯಿಂದಲೇ ಪಿಂಚಣಿಗೆ ಅರ್ಹರಾದವನ್ನು ಗುರುತಿಸಿ ಅವರ ಮನೆ ಬಾಗಿಲಿಗೇ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಅವರು ಭಾನುವಾರ, ಹೆಬ್ರಿ ತಾಲೂಕಿನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಪ್ರತಿ ವರ್ಷ ವೃದ್ದಾಪ್ಯ ವೇತನ , ವಿದವಾ ವೇತನ ಮುಂತಾದ ಪಿಂಚಣಿ ಯೋಜೆನಗಳಿಗಾಗಿ 7000 ಕೋಟಿ ರಊ ವೆಚ್ಚವಾಗಲಿದೆ, ಇದರಲ್ಲಿ ಮಧ್ಯವರ್ತಿಗಳು ಮತ್ತು ಅನರ್ಹ ಫಲಾನುಭವಿಗಳಿಂದ ನೈಜ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ದೊರೆಯುತ್ತಿಲ್ಲ ಇದನ್ನು ತಪ್ಪಿಸುವ ಸಲುವಾಗಿ , ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗುತ್ತಿದ್ದು, ಇದರಿಂದ ಸುಮಾರು 1000 ಕೋಟಿ ರೂ ಅನರ್ಹರ ಪಾಲಾಗುವುದನ್ನು ತಪ್ಪಿಸಬಹುದಾಗಿದ್ದು, ಆಧಾರ್ ಕಾರ್ಡ್ ನಲ್ಲಿ ಪ್ರತಿಯೊಬ್ಬರ ಜನ್ಮ ದಿನಾಂಕ ದಾಖಲಾಗಿರುವುದರಿಂದ ,ನಿಗಧಿತ ವಯೋಮಿತಿ ಮೀರಿದ ವೃದ್ಧರನ್ನು ಸ್ವಯಂ ಗುರುತಿಸಿ ,ಅವರನ್ನು ಯಾವುದೇ ಕಚೇರಿಗಳಿಗೆ ಅಲೆದಾಡಿಸದೇ, ಅವರ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ತಲುಪಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಈಗಾಗಲೇ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಭೆ ನಡೆಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.

ಜನನ ಪ್ರಮಾಣಪತ್ರವನ್ನು ತಹಸೀಲ್ದಾರ್ ಕಚೇರಿಯಿಂದ ಪಡೆಯುವ ಕುರಿತಂತೆ ಆದೇಶ ಮಾಡಲು ನಿರ್ಧರಿಸಿದ್ದು, ಕಂದಾಯ ಇಲಾಖೆ ವ್ಯಾಪ್ತಿಗೆ ಸಂಬಂದಿಸಿದಂತೆ ಖಾತೆ ಮತ್ತು ಪೋಡಿಗಳಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಲು ಅಭಿಯಾನ ಮಾದರಿಯಲ್ಲಿ ಕಾರ್ಯ ನಿರ್ವಹಿಸಟಂಗುವುದು, ಜನರ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹರ ಒಗದಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಕಂದಾಯ ಸಚಿವರು ತಿಳಿಸಿದರು. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಈಗಾಗಲೇ ಕಂದಾಯ ಉಪ ವಿಭಾಗ ಇದ್ದು, ಇನ್ನೊಂದು ಪತ್ಯೇಕ ಕಂದಾಯ ಉಪ ವಿಭಾಗ ಅರಂಭಿಸುವ ಬಗ್ಗೆ, ಹೆಬ್ರಿಯಲ್ಲಿ ಹೊಸ ಹೋಬಳಿ ಆರಂಭಿಸುವ ಬಗ್ಗೆ , ಅಕ್ರಮ ಸಕ್ರಮ ಯೋಜನೆಯಲ್ಲಿ ನಿವೇಶನ ಪಡೆದಿರುವವರು ಅದನ್ನು ಮಾರಾಟ ಮಾಡಲು ಇರುವ ಷರತ್ತುಗಳ ತಿದ್ದುಪಡಿ ಮಾಡುವ ಬಗ್ಗೆ, ಜನವಸತಿ ಪ್ರದೇಶಗಳಿಗೆ ಯಾವುದೇ ತೊಂದರೆಯಾಗದಂತೆ ಕಸ್ತೂರಿ ರಂಗನ್ ವರದಿಯಲ್ಲಿ ತಿದ್ದುಪಡಿ ಮಾಡುವ ಬಗ್ಗೆ, ಆಧಾರ್ ಕಾಡ್ ್ ತಿದ್ದುಪಡಿಗಳನ್ನು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಮಾಡಲು ಅವಕಾಶ ಕಲ್ಪಸಿಕೊಡುವ ಬಗ್ಗೆ ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಗೆ ಹೆಚ್ಚಿನ ಗ್ರಾಮಗಳನ್ನು ಸೇರ್ಪಡೆ ಮಾಡುವ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಅಶೋಕ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಸುವರ್ಣ ಕಾರ್ಕಳ ಯೋಜನೆಯಡಿಯಲ್ಲಿ ಹೆಬ್ರಿ ತಾಲೂಕಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮಗಳು ನಡೆದಿದ್ದು, 2 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆ ಅಭಿವೃದ್ಧಿ, ಟ್ರೀಪಾರ್ಕ್ ಅಭಿವೃದ್ದಿ, ಬಹುಗ್ರಾಮ ಕುಡಿಯುವ ನೀರು ಯೋಜನೆ, 89 ಕಾಲು ಸಂಕಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ನಡೆದಿದ್ದು, ನೂತನ ತಾಲೂಕು ಕಚೇರಿ ನಿರ್ಮಾಣದ ನಂತರ , ಸಬ್ ರಿಜಿಸ್ಟ್ರಾರ್ ಕಚೇರಿ, ಕೃಷಿ ಇಲಾಖೆ, ತಾಲೂಕು ಪಂಚಾಯತ್ , ಆರ್.ಟಿ.ಓ ಸೇರಿದಂತೆ ಪ್ರಮುಖ ಎಲ್ಲಾ ಇಲಾಖೆಗಳು ಆರಂಭಗೊಳ್ಳಲಿವೆ ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ನಾಗರೀಕರಿಗೆ ಅಗತ್ಯವಿರುವ ಸೇವೆಗಳನ್ನು , ಸ್ವಯಂ ಆಗಿ ನೀಡಲು ನಿರ್ಧರಿಸಿದ್ದು, ವೃದ್ದಾಪ್ಯ ವೇತನ , ವಿಧವಾ ವೇತನ ನೀಡಲು 3000 ಮಂದಿ ಅರ್ಹರನ್ನು ಗುರುತಿಸಲಾಗಿದೆ, ಕಂದಾಯ ಸೇವೆಗಳನ್ನು ಒದಗಿಸುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು. ಸರ್ವೆ ಯಲ್ಲೂ ಸಹ ಪ್ರಥಮ ಸ್ಥಾನದಲ್ಲಿದೆ, ಸಕಾಲ ಅಡಿ ತ್ವರಿತ ಅರ್ಜಿ ವಿಲೇವಾರಿಯಲ್ಲಿ ಪ್ರಥಮ, ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ನೀಡುವ ಸೇವೆಗಳಲ್ಲೂ ಸಹ ಪ್ರಥಮವಾದ್ದು, ಜನಪರವಾಗಿ ರಾಜ್ಯಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ, ಜಿಲ್ಲೆಯಲ್ಲಿನ ಮರಳು ಸಮಸ್ಯೆ ಬಗೆಹರಿದಿದ್ದು, ವಸತಿ ಯೋಜನೆಗಳಿಗೆ ಮರಳಿನ ಸಮಸ್ಯೆಯಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ್, ಕಾರ್ಕಳ ತಾ.ಪಂ. ಅದ್ಯಕ್ಷೆ ಸೌಭಾಗ್ಯ ಮಡಿವಾಳ, ಜಿಲ್ಲಾ ಪಂಚಾಯತ್ ಸದಸ್ಯರಾದ ಜ್ಯೋತಿ ಹರೀಶ್, ಸುಪ್ರೀತಾ ಕುಲಾಲ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಕಾರ್ಕಳ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ. ಮೇಜರ್ ಹರ್ಷ ಹಾಗೂ ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು , ತಾ.ಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಹೆಬ್ರಿ ತಹಸೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿದರು, ಸೀತಾನದಿ ವಿಠಲ ಶೆಟ್ಟಿ ವಂದಿಸಿದರು.

Comments are closed.