ಕರಾವಳಿ

ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ್ ಹೆಬ್ಬಾರ್ ಗೆಲುವಿನ ನಗೆ; ಅಧಿಕೃತ ಘೋಷಣೆ ಬಾಕಿ

Pinterest LinkedIn Tumblr

ಉತ್ತರಕನ್ನಡ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್​ ಭರ್ಜರಿ ಗೆಲುವು ಸಾಧಿಸಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಅವರು 31, 875 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಭೀಮಣ್ಣ ನಾಯ್ಕ್​, ಜೆಡಿಎಸ್​ನಿಂದ ಚೈತ್ರಾ ಗೌಡ ಸ್ಪರ್ಧಿಸಿದ್ದರು.

ಸದ್ಯ ಬಿಜೆಪಿಗೆ ಯಲ್ಲಾಪುರದಲ್ಲಿ ಮೊದಲ ಗೆಲುವು ಸಿಗುವ ಮೂಲಕ ಜಯದ ಖಾತೆ ತೆರೆದಂತಾಗಿದ್ದು ಕಾರ್ಯಕರ್ತರಲ್ಲಿ ಸಂಭ್ರಮದ ಜೈಕಾರ ಮುಗಿಲುಮುಟ್ಟಿದೆ.

Comments are closed.