ಬದನೆ ನೇರಳೆ ಬಣ್ಣ ಮಾತ್ರವಲ್ಲದೆ, ಹಲವು ಗಾತ್ರ, ಬಣ್ಣ ಹಾಗೂ ವಿನ್ಯಾಸದಲ್ಲಿ ಕಂಡುಬರುವ ಹೆಚ್ಚು ದುಬಾರಿಯಲ್ಲದ ತರಕಾರಿ. ಬದನೆಯನ್ನು ಬೇಯಿಸಿ, ಕಾಯಿಸಿ, ಹಬೆಯಲ್ಲಿರಿಸಿ, ಆರೈಕೆ ಮಾಡಿಕೊಂಡು ತಿನ್ನಬಹುದು. ಹಬೆಯಲ್ಲಿ ಬೇಯಿಸಿದ ಬದನೆಕಾಯಿಯಲ್ಲಿ ಅತ್ಯಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇರುತ್ತದೆ. ಆಂಥೋಸಿಯಾನ್ಸಿಸ್ ಅಂಶವು ಹೃದಯದ ಆರೋಗ್ಯ ಕಾಪಾಡುತ್ತದೆ. ನಸುನಿನ್ ಎನ್ನುವ ಮತ್ತೊಂದು ಅಂಶವು ಮೆದುಳಿಗೆ ರಕ್ತಸಂಚಾರ ಸರಾಗವಾಗಿ ಆಗಲು ನೆರವಾಗುತ್ತದೆ.
ಬದನೆ ಗಟ್ಟಿಯಾದ ಹೊರ ಕವಚ, ಒಳಗೆ ಬೀಜಗಳ ರಾಶಿ ಹೊಂದಿರುವ ತರಕಾರಿ. ಬೀಜಗಳು ತುಂಬ ಆರೋಗ್ಯಕಾರಿ. ಅಧಿಕ ನೀರಿನಂಶ ಹೊಂದಿರುವ ಬದನೆ, ಮೂತ್ರ ವರ್ಧಕ ಮತ್ತು ವಿರೇಚಕ. ಬದನೆಯಲ್ಲಿ ಸತು, ಫಾಸ್ಪರಸ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ1, ಬಿ2, ಬಿ2 ಮತ್ತು ಬಿ6 ಇದೆ.
ಬದನೆಯ ಆರೋಗ್ಯ ಲಾಭ:
1. ಹೃದಯದ ಕಾಯಿಲೆ ಅಪಾಯ ಕಡಿಮೆ: ಬದನೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಹೃದಯದ ಕಾಯಿಲೆಯ ಅಪಾಯ ತಗ್ಗಿಸುತ್ತದೆ. ಹೃದ್ರೋಗಕ್ಕೆ ಕಾರಣವಾಗುವ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಬದನೆ ಸೇವನೆಯಿಂದ ಕಡಿಮೆಯಾಗುತ್ತದೆ.
2.ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಬದನೆಕಾಯಿಯಲ್ಲಿ ಅಧಿಕ ನಾರಿನಾಂಶವಿದ್ದು, ಜೀರ್ಣಕ್ರಿಯೆ ಮತ್ತು ದೇಹ ಸಕ್ಕರೆ ಅಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆನ್ನು ನಿಧಾನಗೊಳಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲಿದೆ. ಬದನೆಯಲ್ಲಿರುವ ಪಾಲಿಫಿನಾಲ್‌ಗಳಿಂದ ಸಕ್ಕರೆ ಹೀರುವಿಕೆ ಕಡಿಮೆಯಾಗಿ, ಇನ್ಸುಲಿನ್ ಸ್ರವಿಸುವಿಕೆ ಹೆಚ್ಚಾಗುತ್ತದೆ.
3.ತೂಕ ಕಾಪಾಡಲು ಸಹಕಾರಿ: ಬದನೆಯಲ್ಲಿ ಅಧಿಕ ನಾರಿನಂಶ ಮತ್ತು ಕ್ಯಾಲರಿ ಕಡಿಮೆ ಇದೆ. ಇದು ತೂಕ ಇಳಿಸಿಕೊಳ್ಳಲು ಸಹಕಾರಿ. ಬದನೆಯಲ್ಲಿರುವಂತಹ ನಾರಿನಂಶವು ಹೊಟ್ಟೆ ತುಂಬಿದ ಭಾವನೆ ಮತ್ತು ತೃಪ್ತಿ ನೀಡುವುದು. ಇದರಿಂದ ಕ್ಯಾಲರಿ ಸೇವನೆ ಕಡಿಮೆಯಾಗಲಿದೆ.
ಹಲವು ಪೋಷಕಾಂಶಗಳ ಆಗರ: ಬದನೆಯಲ್ಲಿ ಏಶ್ಯಾ ಮತ್ತು ಪಾಶ್ಚಿಮಾತ್ಯ ಬದನೆಕಾಯಿ ಎನ್ನುವ ಎರಡು ವಿಧಗಳಿವೆ. ಸೊಲಾಸೊಡೈನ್, ರಾಮ್ನೋಸಿಲ್, ಗ್ಲೈಕೋ ಸೈಡ್‌ಗಳು ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುತ್ತವೆ ಎಂದು ಸಂಶೋಧನೆಗಳು ಹೇಳಿವೆ. ನಸುನಿನ್ ಎನ್ನುವ ಠೋನ್ಯೂಟ್ರಿಯಂಟ್ ಮತ್ತು ಆ್ಯಂಟಿಆಕ್ಸಿಡೆಂಟ್ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ.
ಬೇರೆ ಪ್ರಯೋಜನ: 1.ಒಂದು ತುಂಡರಿಸಿದ ಬದನೆ, 3 ಮೂಲಂಗಿ ತುಂಡರಿಸಿದ್ದು ಮತ್ತು ಒಂದು ತುಂಡು ಅನಾನಸನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಸೇವನೆ ಮಾಡಿ. ಬದನೆಕಾಯಿಯಲ್ಲಿರುವ ನೀರಿನಂಶ, ಕಡಿಮೆ ಕ್ಯಾಲೋರಿ ಹಾಗೂ ಡಯಟರಿ ಫೈಬರ್‌ಗಳು ದೇಹದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿಡುತ್ತವೆ, ದೇಹದಲ್ಲಿರುವ ನಂಜನ್ನು ಹೊರದಬ್ಬುವ ಪ್ರಕ್ರಿಯೆಯನ್ನು ವೇಗ ಗೊಳಿಸುತ್ತವೆ. ದೇಹದ ತೂಕ ಇಳಿಯಲು ಸಹಾಯ ಮಾಡುತ್ತವೆ.
2.ಟ್ರೈಗ್ಲಿಸರೈಡ್‌ಗಳನ್ನು ತಗ್ಗಿಸಲು: ಅರ್ಧ ಬದನೆಕಾಯಿ ಮತ್ತು ಒಂದು ಸೌತೆಕಾಯಿ ತುಂಡು ಮಾಡಿಕೊಂಡು, ಸ್ವಲ್ಪ ನೀರಿನ ಜತೆಗೆ ಮಿಕ್ಸಿಗೆ ಹಾಕಿ ರುಬ್ಬಿ. ಇದನ್ನು ಶೋಧಿಸಿ ಉಪಾಹಾರಕ್ಕೆ ಮೊದಲು ಪ್ರತಿನಿತ್ಯ 15 ದಿನಗಳ ಕಾಲ ಸೇವಿಸಿ.
3.ಅಧಿಕ ರಕ್ತದೊತ್ತಡ
ಒಂದು ಬದನೆ ತುಂಡು ಮಾಡಿಕೊಂಡು ಅದನ್ನು ಮಿಕ್ಸಿಗೆ ಹಾಕಿ. ಇದನ್ನು ಸರಿಯಾಗಿ ರುಬ್ಬಿಕೊಂಡ ಬಳಿಕ ಅದರ ನೀರನ್ನು ಸೋಸಿಕೊಂಡು 10 ದಿನಗಳ ಕಾಲ ಕುಡಿಯಿರಿ.
4.ಬದನೆ ಮತ್ತು ಕಡಲಕಳೆ
ಒಂದು ಚಮಚ ಕಡಲ ಕಳೆ, ಒಂದು ಚಿಟಿಕೆ ಉಪ್ಪು ಮತ್ತು ಎರಡು ಚಮಚ ಬದನೆ ಪುಡಿಯನ್ನು ಮಿಶ್ರ ಮಾಡಿಕೊಳ್ಳಿ. ಇದನ್ನು ಅರ್ಧಕಪ್ ನೀರಿಗೆ ಹಾಕಿ, ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಸೇವಿಸಿ.
5. ಕೊಲೆಸ್ಟ್ರಾಲ್ ಪ್ರಮಾಣ ಕುಸಿತ: ಚೆನ್ನಾಗಿ ಬೇಯಿಸಿದ ಬದನೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ನ್ನು ತಗ್ಗಿಸುತ್ತದೆ. ಹುರಿದು ಬಳಸುವುದಕ್ಕಿಂತ ಬೇಯಿಸಿ ಸೇವಿಸುವುದೇ ಉತ್ತಮವಾಗಿದೆ.
6. ರಕ್ತ ಸಂಚಾರ ವೃದ್ಧಿ: ಪ್ರತಿದಿನ ಬದನೆಕಾಯಿ ಸೇವಿಸಿದಲ್ಲಿ ಮೆದುಳನ್ನು ಸಮೃದ್ಧ ಗೊಳಿಸುತ್ತದೆ. ಏಕೆಂದರೆ ಇದರಲ್ಲಿ ಫೈಟೋನ್ಯೂಟ್ರಿಯೆಂಟ್ಸ್ ಇವೆ.
7. ಮಧುಮೇಹ ನಿಯಂತ್ರಣ: ಬದನೆಕಾಯಿಯಲ್ಲಿರುವ ಯಥೇಚ್ಛ ನಾರು ಮತ್ತು ಸೋಡಿಯಂಗಳು ರಕ್ತವು ಅಧಿಕ ಪ್ರಮಾಣದ ಗ್ಲೂಕೋಸ್‌ನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಆ ಮೂಲಕ ಟೈಪ್ 2 ಮಧುಮೇಹಿಗಳ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆ ಮಾಡುತ್ತದೆ. ಇದರಲ್ಲಿರುವ ಫೀನಾಲ್‌ಗಳು ಮತ್ತು ಗ್ಲಿಸೆಮಿಕ್‌ಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡುತ್ತವೆ.
8.ಕಫ ನಿವಾರಣೆ: ಬದನೆಯನ್ನು ಬೆಂಕಿಯಲ್ಲಿ ಸುಟ್ಟು, ಉಪ್ಪು ಸೇರಿಸಿ ತಿನ್ನುವುದರಿಂದ, ಅಧಿಕ ಕವನ್ನು ತೆಗೆಯಬಹುದು. ಉಸಿರಾಟ ಹಾಗು ಕೆಮ್ಮನ್ನು ಸಹ ಸುಧಾರಿಸಬಹುದು
Comments are closed.