ಕರಾವಳಿ

ಕೈಕಾಲು ಕಟ್ಟಿ ವೃದ್ಧ ದಂಪತಿಗಳ ಬರ್ಬರ ಹತ್ಯೆ

Pinterest LinkedIn Tumblr


ಅಂಕೋಲಾ : ಕೈಕಾಲು ಕಟ್ಟಿ ವೃದ್ಧ ದಂಪತಿಗಳ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಂದ್ಲೆಯಲ್ಲಿ ನಡೆದಿದೆ.

ಘಟನೆ ಶುಕ್ರವಾರ ತಡರಾತ್ರಿ ನಡೆದಿರಬಹುದು ಎಂದು ಊಹಿಸಲಾಗಿದ್ದು ಇಬ್ಬರು ದಂಪತಿಗಳನ್ನು ಕಾಲುಗಳನ್ನು ಕಟ್ಟಿ ಹತ್ಯೆಗೈಯಲಾಗಿದೆ.

ನಾರಾಯಣ ಬೊಮ್ಮಯ್ಯ ನಾಯಕ ಮತ್ತು ಸಾವಿತ್ರಿ ನಾರಾಯಣ ನಾಯಕ ಕೊಲೆಯಾದ ವೃದ್ಧ ದಂಪತಿಗಳಾಗಿದ್ದು ಸ್ಥಳಕ್ಕೆ ಅಂಕೋಲ ಪೊಲೀಸರು ತೆರಳಿ ತನಿಖೆ ಕೈಗೊಂಡಿದ್ದಾರೆ.

ಕೊಲೆಯು ದರೋಡೆಗಾಗಿ ಮಾಡಲಾಗಿದೆಯೋ ಅಥವಾ ವೈಷಮ್ಯದಿಂದ ಹತ್ಯೆ ಮಾಡಲಾಗಿದೆಯೊ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು ಡಿಎಸ್ಪಿ ಶಂಕರ ಮಾರಿಹಾಳ, ಪಿಎಸ್ಐ ಸಂಪತಕುಮಾರ, ನವೀನ ನಾಯಕ, ಮತ್ತು ಶ್ವಾನ ದಳ, ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.