ಕರಾವಳಿ

ದೇರೆಬೈಲ್ ಹಾಗೂ ಕದ್ರಿ ಉತ್ತರ ವಾರ್ಡಿನಲ್ಲಿ ರೂ. 30 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು :ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೆಬೈಲ್ ಪಶ್ಚಿಮ ವಾರ್ಡ್ ಹಾಗೂ ಕದ್ರಿ ಉತ್ತರ ವಾರ್ಡಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸಾರ್ವಜನಿಕರು ಗುದ್ದಲಿಪೂಜೆ ನೆರವೇರಿಸಿದರು.

ದೇರೆಬೈಲ್ ಪಶ್ಚಿಮ ವಾರ್ಡಿನ ಸುಂಕದಕಟ್ಟೆಯಲ್ಲಿ ತಡೆಗೋಡೆ ದುರಸ್ತಿ 5 ಲಕ್ಷ ರೂ, ಸುಂಕದಕಟ್ಟೆಯ ಬಳಿ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಸಾರ್ವಜನಿಕರ ಮುಖೇನ ಗುದ್ದಲಿಪೂಜೆ ನೆರವೇರಿಸಿದ್ದೇವೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಹಾಗೂ ಕದ್ರಿ ಉತ್ತರ ವಾರ್ಡಿನ ಕದ್ರಿ ಪಾದೆ ಬಳಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಹತ್ ತೋಡಿಗೆ ತಡೆಗೋಡೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು. ಸ್ಥಳೀಯರ ಬೇಡಿಕೆಯ ಪ್ರಕಾರ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜನರ ಆಶೋತ್ತರಗಳನ್ನು ಈಡೇರಿಸಲು ನಮ್ಮ ಆಡಳಿತ ಬದ್ಧವಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

Comments are closed.