ಕರಾವಳಿ

ವಕ್ವಾಡಿ ಫ್ರೆಂಡ್ಸ್ ಯುವಕ ಮಂಡಲ- ಉಚಿತ ಕನ್ನಡಕ ವಿತರಣೆ

Pinterest LinkedIn Tumblr

ಕುಂದಾಪುರ: ವಕ್ವಾಡಿ ಫ್ರೆಂಡ್ಸ್ ಯುವಕ ಮಂಡಲ (ರಿ.),ವಕ್ವಾಡಿ ವತಿಯಿಂದ ಡಿ.25 ರಂದು ನಡೆದ ಕಣ್ಣಿನ ತಪಾಸಣೆ ನಡೆದಿದ್ದು ಕನ್ನಡಕ ವಿತರಣೆ ಕಾರ್ಯಕ್ರಮ ಜ.2 ರಂದು ನಡೆಯಿತು. ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಕನ್ನಡಕದ ಸಂಪೂರ್ಣ ವೆಚ್ಚವನ್ನು ಭರಿಸಿದ್ದು 100ಕ್ಕೂ ಅಧಿಕ ಕನ್ನಡಕವನ್ನು ಜನರಿಗೆ ಉಚಿತವಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ರವಿರಾಜ್ ಶೆಟ್ಟಿ, ಪ್ರಸಾದ್ ನೇತ್ರಾಲಯ ಉಡುಪಿಯ ಸಿಬ್ಬಂದಿಗಳು ಮತ್ತು ವಕ್ವಾಡಿ ಫ್ರೆಂಡ್ಸ್ ಯುವಕ ಮಂಡಲದ ಪದಾಧಿಕಾರಿಗಳು ಇದ್ದರು.

Comments are closed.