ಕರಾವಳಿ

ಮರವಂತೆ ಅಯ್ಯಪ್ಪಸ್ವಾಮಿ ಊಟದಲ್ಲಿ ಕೈಚಳಕ ತೋರಿಸಲೆತ್ನಿಸಿದ ಸರಗಳ್ಳಿಯರ ಬಂಧನ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಮರವಂತೆಯ ಶ್ರೀ ರಾಮ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಅನ್ನದಾನಕ್ಕೆ ಬಂದ ಸರಕಳ್ಳಿಯರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.

ಮರವಂತೆ ಶ್ರೀ ರಾಮ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಶಬರಿಮಲೆ ಹೊರಡುವ ಪ್ರಯುಕ್ತ ಅನ್ನದಾನ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ನಾವುಂದ ಮೂಲದ ಮಹಿಳೆಯೊಬ್ಬರು ನೆರಕರೆಯವರೊಂದಿಗೆ ಹೋಗಿ ಅಲ್ಲಿ ಊಟ ಮುಗಿಸಿ ಕೈತೊಳೆಯುತ್ತಿದ್ದಾಗ ಇಬ್ಬರು ಅಪರಿಚಿತ ಮಹಿಳೆಯರು ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಅಂದಾಜು 1 ಲಕ್ಷ 25 ಸಾವಿರ ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಬಲತ್ಕಾರವಾಗಿ ಎಳೆದು ಕಿತ್ತುಕೊಳ್ಳಲು ಯತ್ನಿಸಿದಾಗ ಕರಿಮಣಿ ಸರ ತುಂಡಾಗಿದ್ದು, ಇದೇ ವೇಳೆ ಗಾಬರಿಯಿಂದ ಮಹಿಳೆ ಕೂಗಿಕೊಂಡಾಗ ಸಾರ್ವಜನಿಕರು ಸೇರಿ ಇಬ್ಬರು ಮಹಿಳೆಯರನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.