ಕುಂದಾಪುರ: ಹಲವು ವರ್ಷಗಳ ಬೇಡಿಕೆಯಾಗಿದ್ದ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಂಡ್ಲೂರು-ಸೌಕೂರು ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಸೋಮವಾರ ನೆರವೇರಿಸಿದರು.
ಸಂಪೂರ್ಣ ಹದಗೆಟ್ಟಿರುವ ಕಂಡ್ಲೂರು- ಸೌಕೂರು ರಸ್ತೆಯಲ್ಲಿ ಜನರಿಗೆ ಸುಗಮ ಸಂಚಾರಕ್ಕೆ ತೊಡಕುಂಟಾಗಿತ್ತು. ಸದ್ಯ 45 ಲಕ್ಷ ಅಂದಾಜು ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ.
ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಬಿ.ಎಂ ಸುಕುಮಾರ ಶೆಟ್ಟಿ, ಬೈಂದೂರು ಕ್ಷೇತ್ರಕ್ಕೆ ಈಗಾಗಾಲೇ 400 ಕೋಟಿ ಅನುದಾನ ಬಂದಿದ್ದು ಕೆಲವು ಕಾಮಗಾರಿ ಈಗಾಗಲೇ ಆರಂಭವಾಗಿದೆ. ಯಾವುದೇ ಕಾಮಗಾರಿಯಲ್ಲೂ ಕಳಪೆಯಾಗಬಾರದೆಂಬ ನಿರ್ದೇಶನವನ್ನು ಸಂಬಂದಪಟ್ಟವರಿಗೆ ಸೂಚಿಸಲಾಗಿದೆ. ಜನರ ಮೂಲಸೌಕರ್ಯಗಳ ಬೇಡಿಕೆಗಳನ್ನು ಪೂರೈಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.ಇನ್ನು ಹಲವು ವರ್ಷಗಳ ಬೇಡಿಕೆಯಾದ ಯಡಮೊಗೆ ಸೇತುವೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಸಂಪೂರ್ಣವಾಗಿದ್ದು ಮುಂದಿನ ವಾರ ಕಾಮಗಾರಿಯ ಗುದ್ದಲಿ ಪೂಜೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯ ಸತೀಶ ಪೂಜಾರಿ, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೀವ ಶೆಟ್ಟಿ, ಕಾವ್ರಾಡಿ ಗ್ರಾ.ಪಂ ಸದಸ್ಯ ದಿನೇಶ್ ಆಚಾರ್ಯ, ಕಾಮಗಾರಿ ಗುತ್ತಿಗೆದಾರ ಕಮಲಾಕ್ಷ ನಾಯಕ್, ಸ್ಥಳೀಯ ಮುಖಂಡರಾದ ಸುರೇಂದ್ರ ಶೆಟ್ಟಿ ಗುಲ್ವಾಡಿ, ಹನೀಫ್ ಗುಲ್ವಾಡಿ, ಕುಪ್ಪ ಸೌಕೂರು, ಬಸವ ಪೂಜಾರಿ, ಮಹೇಶ್ ಪೂಜಾರಿ, ಮನೋಜ್ ಕುಮಾರ್ ತಲ್ಲೂರು, ಮುಕ್ಕೋಡು ಸಂತೋಷ್ ಪೂಜಾರಿ, ಭರತ್ ಶೆಟ್ಟಿ ಸೌಕೂರು, ರವೀಂದ್ರ ಶೆಟ್ಟಿ ಚಿಕ್ಕಪೇಟೆ, ರಾಘವೇಂದ್ರ ಆಚಾರ್, ಅಜಿತ್ ಆಚಾರ್ ಚಿಕ್ಕಪೇಟೆ ಮೊದಲಾದವರಿದ್ದರು.
Comments are closed.