ಕುಂದಾಪುರ: ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ನಿತ್ಯ ಸಾವಿರಾರು ವಾಹನಗಳು ಆಗಮಿಸುತ್ತದೆ. ಈ ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿ- ದೇವಲ್ಕುಂದ ದ್ವಿಪಥ ರಸ್ತೆ ಕಾಮಗಾರಿಯ ಭೂಮಿ ಪೂಜೆಯನ್ನು ಬುಧವಾರ ಬೈಂದೂರು ಶಾಸಕ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಅಂದಾಜು 18 ಕೋಟಿ ವೆಚ್ಚದಲ್ಲಿ ಹೆಮ್ಮಾಡಿ- ದೇವಲ್ಕುಂದ ದ್ವಿಪಥ ರಸ್ತೆ ಕಾಮಗಾರಿ ನಡೆಯಲಿದ್ದು ಮೊದಲ ಹಂತವಾಗಿ ಹೆಮ್ಮಾಡಿಯಿಂದ ವಂಡ್ಸೆ ಸಮೀಪದ ನೆಂಪುವರೆಗೆ ರಸ್ತೆ ದ್ವಿಪತಗೊಳ್ಳಲಿದೆ. ಸುಮಾರು 11 ಮೀಟರ್ ಅಗಲದ ರಸ್ತೆ ಇದಾಗಿದ್ದು ಮುಂದಿನ ಹಂತದಲ್ಲಿ ನೆಂಪುವಿನಿಂದ ಇಡೂರು ತನಕ ಹಾಗೂ ಮೂರನೇ ಹಂತದಲ್ಲಿ ಇಡೂರಿನಿಂದ ಹಾಲ್ಕಲ್ ವರೆಗೆ ರಸ್ತೆ ನಿರ್ಮಾಣಗೊಳ್ಳಲಿದ್ದು ಕೊಲ್ಲೂರು ಆಗಮಿಸುವ ಭಕ್ತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಇನ್ನು ರಸ್ತೆ ದ್ವಿಪಥದ ಹಿನ್ನೆಲೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸೂಕ್ತ ರೀತಿಯಲ್ಲಿ ಮಾಡಿ ಉತ್ತಮ ರೀತಿಯ ಕಾಮಗಾರಿ ಮಾಡಬೇಕು ಎಂದು ಸಂಬಂದಪಟ್ಟ ಇಂಜಿನಿಯರ್ ಅವರಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭ ಜಿಲ್ಲಾಪಂಚಾಯತ್ ಸದಸ್ಯೆ ಶೋಭಾ ಜಿ. ಪುತ್ರನ್, ಹೆಮ್ಮಾಡಿ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ, ಕಟ್ ಬೆಲ್ತೂರು ಗ್ರಾಮಪಂಚಾಯತ್ ಸದಸ್ಯ ಚಂದ್ರ ಭಟ್, ರಾಮ ಶೆಟ್ಟಿ, ರವಿ ಗಾಣಿಗ ಮೊದಲಾದವರಿದ್ದರು.
Comments are closed.