ಕರಾವಳಿ

ವಾಹನದ ಮಾಲಿಕತ್ವ: ಮೂಲ ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ

Pinterest LinkedIn Tumblr

ಉಡುಪಿ: ಕೊಲ್ಲೂರು ವನ್ಯಜೀವಿ ವಲಯ ವ್ಯಾಪ್ತಿಯ ಚಿತ್ತೂರು ಘಟಕದ ಶಾರ್ಖೆ ಎಂಬಲ್ಲಿ ಫೆ. 17 ರಂದು ಕಿರಾಲ್ ಬೋಗಿ ಜಾತಿಯ ಮರದ 6 ದಿಮ್ಮಿಗಳನ್ನು 0.677 ಘಮೀ ಸೊತ್ತುಗಳನ್ನು ಮಹೀಂದ್ರಾ ಮಾಕ್ಸಿ ಟ್ರಕ್ ವಾಹನ (ನೊಂದಣಿ ಸಂಖ್ಯೆ: ಕೆಎ-20 ಸಿ 3194) ದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಕೊಲ್ಲೂರು ವನ್ಯಜೀವಿ ವಲಯದಲ್ಲಿ ಪ್ರಕರಣ ದಾಖಲಿಸಿ ಸದ್ರಿ ವಾಹನವನ್ನು ವಶಪಡಿಸಿಕೊಂಡು ಕರ್ನಾಟಕ ಅರಣ್ಯ ಕಾಯ್ದೆಯ ಪ್ರಕಾರ ಮುಂದಿನ ಕ್ರಮ ಜರುಗಿಸಲು ಕಾರ್ಕಳ, ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಯವರಿಗೆ ಹಾಜರುಪಡಿಸಿರುತ್ತಾರೆ.

ಮಹೀಂದ್ರಾ ಮಾಕ್ಸಿ ಟ್ರಕ್ ವಾಹನದ ಬಗ್ಗೆ ಯಾವುದೇ ಹಕ್ಕು ಬಾಧ್ಯತೆಯನ್ನು ರುಜುವಾತುಪಡಿಸುವುದಾದಲ್ಲಿ ಅಂತಹ ವ್ಯಕ್ತಿಗಳು ತಮ್ಮಲ್ಲಿರುವ ಸದ್ರಿ ವಾಹನದ ಮಾಲೀಕತ್ವದ ಮೂಲ ದಾಖಲೆಗಳೊಂದಿಗೆ ಪ್ರಕಟಣೆಯ 30 ದಿವಸಗಳ ಒಳಗೆ ನ್ಯಾಯಾಲಯದ ಮುಂದೆ ಹಾಜರಾಗಿ ಮಾಲೀಕತ್ವವನ್ನು ರುಜುವಾತು ಪಡಿಸಬೇಕು.
ನಿಗಧಿತ ಅವಧಿಯೊಳಗೆ ಯಾವುದೇ ಅಹವಾಲು ಸಲ್ಲಿಸದೆ ಇದ್ದಲ್ಲಿ ಮೇಲಿನ ವಾಹನದ ಮಾಲೀಕತ್ವ ಸಾಬೀತುಪಡಿಸುವ ಯಾವುದೇ ವ್ಯಕ್ತಿ ಇರುವುದಿಲ್ಲವೆಂದು ಭಾವಿಸಿ, ಕರ್ನಾಟಕ ಅರಣ್ಯ ಕಾಯ್ದೆಯ ವಿಧಿಯಂತೆ ಕ್ರಮ ಜರುಗಿಸಿ, ಸದ್ರಿ ವಾಹನವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆಜ್ಞೆ ಹೊರಡಿಸಲಾಗುವುದು ಎಂದು ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.