ನಮ್ಮ ದೇಶದಲ್ಲಿರುವ ಸಸ್ಯಸಂಪತ್ತು ಹಾಗೂ ಅಪಾರ ಆಯುರ್ವೇದ ಔಷಧಿಗಳ ಬಗ್ಗೆ ಒಮ್ಮೊಮ್ಮೆ ನಮಗೆ ಅರಿವಿಲ್ಲದೆ ಅದನ್ನು ತ್ಯಜಿಸಿ ಬಿಡುತ್ತವೆ, ಮನೆಯ ಹಿತ್ತಲಲ್ಲಿ ಬೆಳೆದಿದೆ ಎನ್ನುವ ಕಾರಣಕ್ಕೆ ಬಹಳ ಸಲ ಹಲವು ಔಷಧಿಯ ಗುಣವುಳ್ಳ ಹಣ್ಣುಗಳನ್ನು ನಾವು ತಿನ್ನಲು ಹಿಂಜರಿಯುತ್ತೇವೆ. ನಮ್ಮ ಈ ಪುಣ್ಯ ಭೂಮಿಯಲ್ಲಿ ಸಕಲ ಕಾಯಿಲೆಗೂ ನಮ್ಮ ಮಣ್ಣಿನಲ್ಲಿ ಬೆಳೆಯುವ ಆಹಾರಗಳಿಂದ, ಸಸ್ಯಗಳಿಂದ ಚಿಕಿತ್ಸೆ ನೀಡಬಹುದು ಆದರೆ ಬಹಳಷ್ಟು ಜನ ಇದರ ಬಗ್ಗೆ ಗೊತ್ತಿಲ್ಲದೆ ಯಾವುದೋ ವಿದೇಶಿ ಮೆಡಿಸಿನ್ ಗಳ ಮೊರೆ ಹೋಗುತ್ತಾರೆ. ನಮ್ಮ ದೇಹದ ಸಮತೋಲನ ಕಾಯ್ದುಕೊಳ್ಳಲು ಯಾವುದೋ ಡಯಟ್ ಅವಶ್ಯಕತೆ ಇಲ್ಲ ಬದಲಿಗೆ ನಮ್ಮ ನೆಲದಲ್ಲಿಯೇ ಬೆಳೆಯುವ ಕೆಲ ಅದ್ಬುತ ಫಲಗಳನ್ನು ತಿಂದರೆ ಸಾಕು ಆರೋಗ್ಯ ಸುಧಾರಿಸುತ್ತದೆ.
ಹೌದು ಆರೋಗ್ಯದ ಸ್ಥಿತಿ ಉತ್ತಮವಾಗಿರಲು ಹಣ್ಣುಗಳ ಸೇವನೆ ಬಹಳ ಮುಖ್ಯ, ಉತ್ತಮ ಪೌಷ್ಟಿಕತೆ ಹೊಂದಿರುವ ಹಣ್ಣುಗಳು ಮಾನವನ ಆರೋಗ್ಯಕ್ಕೆ ಅತ್ಯಂತ ಉಪಕಾರಿ. ಇನ್ನು ರಸ್ತೆ ಬದಿಗಳಲ್ಲಿ ಮಾರುವ ಕೆಲವೊಂದು ಹಣ್ಣುಗಳನ್ನು ನಾವು ಅದೆಷ್ಟೋ ಬಾರಿ ಬೇಡ ಎಂದು ಸುಮ್ಮನಿರುತ್ತೇವೆ ಆದರೆ ನಿಜವಾಗಿಯೂ ಒಮ್ಮೊಮ್ಮೆ ಅದರ ಪೌಷ್ಟಿಕ ಗುಣದ ಬಗ್ಗೆ ತಿಳಿದುಕೊಂಡರೆ ಖಂಡಿತ ಚಕಿತರಾಗುತ್ತೇವೆ. ಹೌದು ಅಂತಹುದೇ ಸಾಲಿಗೆ ಬರುತ್ತದೆ ಇಂದು ನಾವು ಹೇಳುತ್ತಿರುವ ಈ ಅದ್ಭುತ ಫಲ ಅದುವೇ ತಾಳೆ ಹಣ್ಣು, ಈ ತಾಳೆ ಹಣ್ಣು ಮನುಷ್ಯನ ದೇಹಕ್ಕೆ ಎಷ್ಟು ಮುಖ್ಯ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ತಾಳೆ ಹಣ್ಣಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಏತಲಾಪಲ್ಲಿಯ ಪಾಮಿಡಿ ಮಂಡಲದಲ್ಲಿ ಹೆಚ್ಚಾಗಿ ಬೆಳೆಯುವ ತಾಳೆ ಹಣ್ಣುಗಳು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ ಮತ್ತು ಬೇಸಿಗೆ ಆರಂಭದ ದಿನಗಳಿಂದ ನಿಧಾನವಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ, ಮಾರ್ಚ್, ಏಪ್ರಿಲ್ ಮತ್ತು ಮೇ ನಲ್ಲಿ ಪಾಮಿಡಿ ಮಂಡಲದಿಂದ ತಾಳೆ ಹಣ್ಣುಗಳು ನಗರಕ್ಕೆ ತಂದು ಮಾರಾಟ ಮಾಡಲಾಗುತ್ತದೆ. ಕೂಲ್ ಡ್ರಿಂಕ್ಸ್ ಸೇರಿದಂತೆ ಇತರೆ ತಂಪು ಪಾನೀಯಗಳ ಸೇವನೆಯಿಂದ ಆರೋಗ್ಯ ಹಣ ಎರಡೂ ಹಾಳುಮಾಡಿಕೊಳ್ಳುವ ಬದಲು ಬಿಸಿಲು ಕಾಲದಲ್ಲಿ ತಾಳೆ ಹಣ್ಣು ಸೇವನೆಯಿಂದ ದೇಹಕ್ಕೆ ತಂಪು, ಆರೋಗ್ಯಕ್ಕೆ ಉತ್ತಮ.
ಹಣ್ಣುಗಳು ಅರೆಪಾರದರ್ಶಕ ಮತ್ತು ತಿಳಿ ಬಿಳಿ ಬಣ್ಣದಲ್ಲಿರುತ್ತವೆ, ಬಿಳಿ ತಿರುಳಿರುವ ದೇಹದೊಳಗೆ ನೀರಿನಂಶದ ದ್ರವವನ್ನು ಹೊಂದಿರುತ್ತದೆ, ತಂಪಾಗಿಸುವ ಗುಣಲಕ್ಷಣಗಳಿಂದಾಗಿ ತೀವ್ರವಾದ ಶಾಖವನ್ನು ಸೋಲಿಸಲು ಇದು ಬೇಸಿಗೆಯ ಹಣ್ಣುಗಳಲ್ಲಿ ಒಂದಾಗಿದೆ, ಅಲ್ಲದೆ ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಈ ಹಣ್ಣಿನಿಂದ ಹೊಟ್ಟೆ ಕಾಯಿಲೆಗಳು ಆಯಾಸ, ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಗುಣಪಡಿಸುತ್ತದೆ ಮಲಬದ್ಧತೆ, ಯಕೃತ್ತಿನ ತೊಂದರೆಗಳು, ವಾಕರಿಕೆ ಹೀಗೆ ಮುಂತಾದ ಸಮಸ್ಯೆಗಳಿಗೆ ರಾಮಬಾಣ ಈ ಹಣ್ಣು. ಬೇಸಿಗೆ ಸಮಯದಲ್ಲಿ ವಿಷಕಾರಿ ತಂಪು ಪಾನೀಯ ಸೇವನೆಯ ಬದಲು ಈ ಬಾರಿ ನೀವು ಈ ತಾಳೆ ಹಣ್ಣನ್ನು ಸೇವಿಸಿ ನೋಡಿ.
Comments are closed.