ಮಂಗಳೂರು : ಮೂಡಬಿದಿರೆಯಲ್ಲಿ ಇತ್ತೀಚಿಗೆ ಜರಗಿದ ರಾಷ್ಟ್ರೀಯ ಮಟ್ಟದ ಕರಾಟೆ ಕುಮಿಟೆ ಸ್ಪರ್ಧೆಯಲ್ಲಿ ಅಮಟೂರ್ ಮೂಲದ ನವನೀತ ಇವರು ಚಿನ್ನದ ಪದಕ ಗಳಿಸಿರುತ್ತಾರೆ. 6ನೇ ತರಗತಿಯಲ್ಲಿ ಕಲಿಯುತ್ತಿರುವ ಈತ ಅಮಟೂರ್ ದೇವದೂತ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುತ್ತಾರೆ.
ಇದಲ್ಲೆದೆ ಈತ ವಿಶೇಷವಾಗಿ ಜುಡೋ ಮಾರ್ಷಿಯಲ್ ಆರ್ಟ್ಸ್ ನಲ್ಲಿ ಆರೆಂಜ್ ಬೆಲ್ಟ್ ಅನ್ನು ಗಳಿಸಿರುತ್ತಾರೆ . ಶ್ರೀಮತಿ ವಿದ್ಯಾ ಹಾಗು ಶ್ರೀ ಜಯಂತ್ ದಂಪತಿಗಳ ಪುತ್ರನಾಗಿರುವ ಈ ಹುಡುಗ ಶ್ರೀ ರಾಮಕೃಷ್ಣ ಆಶ್ರಮ ಪೊಳಲಿಯಲ್ಲಿ ಆಲ್ ಇಂಡಿಯಾ ಮಿಕ್ಸೆಡ್ ಮಾರ್ಷಿಯಲ್ ಆರ್ಟ್ಸ್ ಅಸೋಸಿಯೇಷನ್ ಇದರಡಿಯಲ್ಲಿ ಕುಮಾರಿ ವೆನಿಲ್ಲಾ ಮಣಿಕಂಠ ಇವರ ಶಿಷ್ಯರಾಗಿ ತರಬೇತಿ ಪಡೆಯುತ್ತೀದ್ಧಾರೆ
Comments are closed.