ಕರಾವಳಿ

ಕಾಂಗ್ರೆಸ್ ಹಿರಿಯ ಮುಖಂಡ, ಸಹಕಾರಿ ಧುರೀಣ ಕೆ. ಕೃಷ್ಣರಾಜ್ ಸರಳಾಯ ಇನ್ನಿಲ್ಲ

Pinterest LinkedIn Tumblr

ಉಡುಪಿ: ಕಾಂಗ್ರೆಸ್ ನ ಹಿರಿಯ ಮುಖಂಡ, ಸಹಕಾರಿ ಧುರೀಣ ಕೆ. ಕೃಷ್ಣರಾಜ್ ಸರಳಾಯ ಇಂದು‌ ಮಧ್ಯಾಹ್ನ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಕೊಂಡಿದ್ದಾರೆ. ನೆರೆ ಮನೆಯವರು ಬಾವಿ ಬಳಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ನೋಡಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಉಡುಪಿಯಲ್ಲಿ ಪಟಾಕಿ ಉದ್ಯಮ ನಡೆಸುತ್ತಿದ್ದ ಇವರು, ಪಟಾಕಿ ಸರಳಾಯರೆಂದೇ ಚಿರಪರಿಚಿತರಾಗಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಆಸ್ಟ್ರೇಲಿಯಾ ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪತ್ನಿ ಹಲವು ವರ್ಷಗಳ ಹಿಂದೆಯೇ ಮೃತರಾಗಿದ್ದರು. ಹಾಗಾಗಿ ಒಂಟಿ ಜೀವನವನ್ನು ನಡೆಸುತ್ತಿದ್ದು, ಇತ್ತೀಚೆಗೆ ಖಿನ್ನತೆಗೊಳಗಾಗಿದ್ದಾರೆನ್ನಲಾಗಿದೆ. ಅದರಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.

ಕಾಂಗ್ರೆಸ್ ನ ಹಿರಿಯ ಮುಖಂಡರಾಗಿದ್ದ ಸರಳಾಯರು, ಮಂಡಲ ಪ್ರಧಾನ ಹಾಗೂ ಜಿಲ್ಲಾ ಕಾಂಗ್ರೆಸ್ ನಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

Comments are closed.