ಕುಂದಾಪುರ: ಕಾರ್ಕಳ ತಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 17 ವರ್ಷ ಪ್ರಾಯದ ಅಪ್ರಾಪ್ತೆ ಗರ್ಭವತಿಯಾದ ಪ್ರಕರಣ ಬೆಳಕಿಗೆ ಬಂದಿದ್ದು ಈ ಸಂಬಂಧ ಅಕ್ಷತ್(19) ಎನ್ನುವ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ದೂರಿನನ್ವಯ ತನಿಖಾ ತಂಡವು ದೌರ್ಜನ್ಯಕೊಳ್ಳಗಾದ ಬಾಲಕಿಯ ಮನೆಗೆ ಭೇಟಿ ನೀಡಿದಾಗ ವಿಚಾರ ಬೆಳಕಿದೆ ಬಂದಿದೆ. ಅಧಿಕಾರಿಗಳ ಭೇಟಿ ಸಂದರ್ಭ ಅಪ್ರಾಪ್ತೆಯು ಆರೋಪಿಯ ಮನೆಯಲ್ಲಿಯೇ ಇದ್ದು ಮದುವೆಯಾಗಿರುವುದಾಗಿ ಮನೆಯವರು ಹೇಳಿಕೆ ನೀಡಿದ್ದರು.
ಅಪ್ರಾಪ್ತೆ ಇದೀಗ 4 ತಿಂಗಳ ಗರ್ಭಿಣಿ ಎಂಬ ವಿಚಾರವು ತಿಳಿದುಬಂದಿದ್ದು, ಈ ಹಿನ್ನಲ್ಲೆಯಲ್ಲಿ ಆಪ್ರಾಪ್ತೆಯನ್ನು ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ. ಬಾಲಕಿಗೆ ಹಾಗೂ ಪೋಷಕರಿಗೆ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಬಗ್ಗೆ ಅರಿವು ನೀಡಲಾಯಿತು. ಬಾಲಕಿ ಪೋಷಕರ ದೂರಿನ ಹಿನ್ನೆಲೆ ಆರೋಪಿಯನ್ನು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಡಿ ವೈ. ಎಸ್ ಪಿ ಭರತ್ ರೆಡ್ಡಿ .ಇನ್ಸ್‌ಸೆಕ್ಟರ್ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸದಾನಂದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರ ಪ್ರಭಾಕರ ಆಚಾರ್ಯ, ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್, ಎಎಸ್‌ಐ ಶುಭಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಅಂಗನವಾಡಿ ಕಾರ್ಯಕರ್ತೆ ತರುಣಾ ಮೊದಲಾದವರು ತನಿಖಾ ತಂಡದಲ್ಲಿದ್ದರು.
Comments are closed.