ಕರಾವಳಿ

ಮುಂಬಯಿ : ಯಕ್ಷಗಾನ ಸೇವೆ ನೀಡುವ ಸೌಭಾಗ್ಯ ನಮಗೊದಗಿದೆ – ನ್ಯಾ. ಜಗನ್ನಾಥ ಶೆಟ್ಟಿ

Pinterest LinkedIn Tumblr

ಮಲಾಡ್ ಶನಿಮಂದಿರದ ಭ್ರಹ್ಮಕಲಶಕ್ಕೆ ವರಮಹಾಲಕ್ಷಿ ಪೂಜಾ ಸಮಿತಿಯ ವತಿಯಿಂದ ಸೇವಾ ರೂಪದಲ್ಲಿ ಯಕ್ಷಗಾನ ಮುಹೂರ್ತ

ಮುಂಬಯಿ : ಮಲಾಡ್ ಶನಿಮಂದಿರದ ಭ್ರಹ್ಮಕಲಶವು ಇದೇ ಮೇ ತಿಂಗಳಲ್ಲಿ ನಡೆಯಲಿದ್ದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು ಈ ಸೌಭಾಗ್ಯವು ನಮಗೊದಗಿದೆ. ಕರಾವಳಿ ಕರ್ನಾಟಕದ ಶ್ರೀಮಂತ ಕಲೆಯಾದ ಯಕ್ಷಗಾನವನ್ನು ನಮ್ಮ ಸಮಿತಿಯ ಮಲಾಡ್ ಪರಿಸರದಲ್ಲಿನ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು ಪ್ರದರ್ಶಿಸಲಿದ್ದು, ಈ ಮೊದಲೂ ಅವರು ಯಶಸ್ವಿ ಪ್ರದರ್ಶನವನ್ನು ನೀಡಿ ಸಮಿತಿಗೂ ಕೀರ್ತಿ ತಂದಿರುವರು ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ ಶೆಟ್ಟಿಯವರು ನುಡಿದರು.

ಬಿಲ್ಲವರ ಅಸೊಷಿಯೇಷನ್ ನ ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಾಲಯದಲ್ಲಿ ಮಲಾಡ್ ಶನಿಮಂದಿರದ ಭ್ರಹ್ಮಕಲಶಕ್ಕೆ ವರಮಹಾಲಕ್ಷಿ ಪೂಜಾ ಸಮಿತಿಯ ವತಿಯಿಂದ ಸೇವಾ ರೂಪದಲ್ಲಿ ಪ್ರದರ್ಶಿಸಲಾಗುತ್ತಿರುವ ಯಕ್ಷಗಾನ ಮುಹೂರ್ತವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಿಲ್ಲವರ ಅಸೊಷಿಯೇಷನ್ ನ ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸಂತೋಷ್ ಕೆ ಪೂಜಾರಿಯವರು ಮಾತನಾಡುತ್ತಾ ಈ ಪರಿಸರದ ಯಕ್ಷಗಾನದ ಆಸಕ್ತರಿಗೆ ವರಮಹಾಲಕ್ಷಿ ಪೂಜಾ ಸಮಿತಿಯು ಉತ್ತಮ ವೇದಿಕೆಯನ್ನು ನೀಡಿದೆ. ಯಕ್ಷಗಾನವು ಯಶಸ್ವಿಯಾಗಿ ಶನಿ ಮಂದಿರದಲ್ಲಿ ನಡೆಯಲಿ ಎಂದು ಶುಭ ಹಾರೈಸಿದರು.

ಬಿಲ್ಲವರ ಅಸೊಷಿಯೇಷನ್ ನ ಮಲಾಡ್ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷರಾದ ಶೇಖರ ಪೂಜಾರಿ ಭ್ರಹ್ಮಾವರ ಅವರು ಮಾತನಾಡುತ್ತಾ ಯಕ್ಶಗಾನ ಪಾರಂಪರಿಕ ಶೈಲಿಯಲ್ಲಿ ನಮ್ಮ ಯುವ ಕಲಾವಿದರು ನಡೆಸಿ ಕೊಡುತ್ತಿದ್ದು ನಮ್ಮ ವರಮಹಾಲಕ್ಷಿ ಪೂಜಾ ಸಮಿತಿಗೂ ಗೌರವ ತಂದಿದೆ.

ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅವರು ಉಪಸ್ಥಿತರಿದ್ದು ಮಾತನಾಡುತ್ತಾ ಈ ಪರಿಸರದ ತುಳು ಕನ್ನಡಿಗರು ಈ ಯಕ್ಷಗಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ವಿವಿಧ ಕಾರ್ಯಕ್ರಮವನ್ನು ನೀಡಬೇಕೆಂದರು.

ಯಕ್ಷಗಾನ ಬಾಗವತರಾದ ganesh mayya ಅವರು ಮಾತನಾಡಿ ಯಕ್ಷಗಾನದ ಆಸಕ್ತಿ ಇದ್ದರೂ ಅದಕ್ಕೆ ಬೇಕಾದ ಸಮಯವನ್ನು ನೀಡಬೇಕು. ಹಿಂದೆ ಯಕ್ಷಗಾನವು ಯಶಸ್ವಿಯಾಗಿದೆ ಎಂಬ ಮಹತ್ವಾಕಾಂಕ್ಷೆಯನ್ನು ಬದಿಗೊತ್ತಿ ನಿರ್ಲಕ್ಷ್ಯವಿಲ್ಲದೆ ಸಮಯ ನೀಡಿ ತರಬೇತಿಯನ್ನು ಪಡೆದು ಪ್ರದರ್ಶನ ನೀಡಬೇಕೆಂದರು.
ಯಕ್ಷಗುರು ನಾಗೇಶ್ ಪೊಳಲಿ ಮಾತನಾಡಿ ಈ ಕಲೆಯನ್ನು ಶ್ರದ್ದೆ ಮತ್ತು ಭಕ್ತಿಯಿಂದ ನಿರ್ವಹಿಸಬೇಕು. ಪೂರ್ಣ ಪ್ರಮಾಣದಲ್ಲಿ ಕಲಾವಿದರು ತರಬೇತಿಯನ್ನು ಪಡೆಯಲು ಬರಬೇಕೆಂದರು.

ಕಾರ್ಯಕ್ರಮವನು ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವರಮಹಾಲಕ್ಷಿ ಪೂಜಾ ಸಮಿತಿಯ ಸಂಚಾಲಕರಾದ ಬಿ. ದಿನೇಶ್ ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ವಾಗ್ಲೆ, ಉಪ ಕಾರ್ಯಾಧ್ಯಕ್ಷರುಗಳಾದ ರತ್ನ ಡಿ. ಕುಲಾಲ್, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಗೀತಾ ಜೆ ಮೆಂಡನ್, ದಿವ್ಯ ಪೂಜಾರಿ, ಶೀಲ ಎಂ ಪೂಜಾರಿ, ಯುವ ವಿಭಾಗದ ಕಾರ್ಯದರ್ಶಿ ಸೌಮ್ಯ ಮೆಂಡನ್, ಜೊತೆ ಕಾರ್ಯದರ್ಶಿ ದಿಶಾ ಕರ್ಕೇರ, ದಿನೇಶ್ ಪೂಜಾರಿ, ಸುಂದರ್ ಪೂಜಾರಿ, ಮಹಾಬಲ ಪೂಜಾರಿ, ಸುದೀಪ್ ಪೂಜಾರಿ, ನವೀನ್ ಸಾಲ್ಯಾನ್, ಸನತ್ ಪೂಜಾರಿ, ಉಮೇಶ್ ಅಂಚನ್, ಮತ್ತು ಇತರ ಸದಸ್ಯರುಗಳು ಉಪಸ್ಥಿತರಿದ್ದರು.

_ದಿನೇಶ್ ಕುಲಾಲ್

Comments are closed.