ಮಂಗಳೂರು : ಶ್ರೀ ನಾಗಬ್ರಹ್ಮಾದಿ ಪಂಚ ದೈವೀಕ ಸನ್ನಿಧಿ ಉಳ್ಳಾಲ ಇದರ ಪ್ರಥಮ ಪ್ರತಿಷ್ಠಾ ವರ್ಧಂತ್ಯುತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಶಾರದಾ ನಿಕೇತನದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಎಪ್ರಿಲ್12,ರವಿವಾರ, ಬೆಳಗ್ಗೆ ಶ್ರೀ ನಾಗಬ್ರಹ್ಮಾಧಿ ಪಂಚ ದೈವೀಕ ಸಪರಿವಾರದ ಸಾನಿಧ್ಯದಲ್ಲಿ ಆಶ್ಲೇಷಾ ಬಲಿ ಹಾಗು ನಾಗ ದರ್ಶನ ಜರಗಲಿದ್ದು ಬ್ರ|ಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರಗಲಿದ್ದು ನಾಗಪಾತ್ರಿ ಬೆಳ್ಳರ್ಪಾಡಿ ರಮಾನಂದ ಭಟ್ ರಿಂದ ನಾಗ ದರ್ಶನ ಹಾಗು ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿರುವುದು. ಆಮಂತ್ರಣ ಪತ್ರಿಕೆಯನ್ನು ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಯು.ಎಸ್.ಪ್ರಕಾಶ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಉತ್ಸವ ಸಮಿತಿಯ ಅಧ್ಯಕ್ಷ ಶ್ರೀಕರ ಕಿಣಿ, ಕಾರ್ಯಾಧ್ಯಕ್ಷ ವಿಜಯ ಉಳ್ಳಾಲ್, ಕಾರ್ಯದರ್ಶಿ ಭರತ್ ಕುಮಾರ್, ಸುದೇಶ್ ಮರೋಳಿ, ನವೀನ್ ನಾಯಕ್ ಮತ್ತು ಶಾರದಾ ಮಹಿಳಾ ವೇದಿಕೆಯ ಅಧ್ಯಕ್ಷೆ ರೇಣುಕಾ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ಎಂ.ವಾಸುದೇವ ರಾವ್, ಪಶುಪತಿ ಉಳ್ಳಾಲ ಸಂದರ್ಭೋಚಿತವಾಗಿ ಮಾತನಾಡಿದರು. ಉಪಾಧ್ಯಕ್ಷ ಲಕ್ಷ್ಮಣ್ ಟೈಲರ್ ವಂದನಾರ್ಪಣೆಗೈದರು.
Comments are closed.