ಕರಾವಳಿ

ಪುರುಷರೂ ಶೇವ್‌ ಮಾಡುವಾಗ ರಕ್ತ ಬರುತ್ತಿದ್ದರೆ, ಈ ರೀತಿ ಮಾಡಿ.!

Pinterest LinkedIn Tumblr

ಮಹಿಳೆಯರಿಗೆ ಮುಖದ ಕಾಂತಿ ಎಷ್ಟು ಮುಖ್ಯನೋ ಹಾಗೆಯೆ ಪುರುಷನಿಗೂ ತನ್ನ ಮುಖದ ಕಾಂತಿ ಅಷ್ಟೇ ಮುಖ್ಯ ಹಾಗಾಗಿ ಶೇವಿಂಗ್ ಮಾಡಿಕೊಂಡಾಗ ಕೆಲವರ ಮುಖದಲ್ಲಿ ಕೆಲವೊಂದು ಅಲರ್ಜಿ ಸಮಸ್ಯೆಗಳು ಎಡರುಗುತ್ತವೆ ಹಾಗಾಗಿ ಅಂತ ಸಮಸ್ಯೆಗಳಿಂದ ದೂರವಿರಬೇಕು ಅಂದ್ರೆ ಇವುಗಳನ್ನು ಪಾಲಿಸಿ.

ಶೇವ್‌ ಮಾಡುವಾಗ ರಕ್ತ ಬರುತ್ತಿದ್ದರೆ ಲೋಳೆರಸ ಬಳಸಬೇಕು. ಇದು ಉರಿ ಕಡಿಮೆ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಸೇರದಂತೆ ಮಾಡುತ್ತದೆ. ಹೀಗಾಗಿ ಶೇವ್‌ ಮಾಡಿದ ಬಳಿಕ ಲೋಳೆರಸ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಮುಖ ತೊಳೆಯಬೇಕು.

ಶೇವ್‌ ಮಾಡುವ ಮುನ್ನ ಸೇಬುಹಣ್ಣಿನ ರಸ ಮತ್ತು ವಿನೆಗರ್‌ ಎರಡನ್ನೂ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಬೇಕು. 10 ನಿಮಿಷ ಬಿಟ್ಟು ಶೇವ್‌ ಮಾಡಿದರೆ ಮುಖ ಉರಿಯಾಗುವುದು ಅಥವಾ ರಕ್ತ ಸೋರುವುದು ಕಡಿಮೆಯಾಗುತ್ತದೆ.

ಯಾವುದೇ ಕಾರಣಕ್ಕೂ ಪ್ರತಿದಿನ ಶೇವ್‌ ಮಾಡಬಾರದು. ಮುಖ ರಫ್‌ ಆಗುತ್ತದೆ. ಚರ್ಮಕ್ಕೆ ಸ್ವಲ್ಪ ರೆಸ್ಟ್‌ ಕೊಡಬೇಕು. ವಾರಕ್ಕೆ 2 ಅಥವಾ ಶೇವ್‌ ಮಾಡುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು.

ಶೇವ್‌ ಮಾಡುವುದಕ್ಕೂ ಮುನ್ನ ಬಿಸಿ ನೀರಿನಿಂದ ಮುಖ ತೊಳೆದುಕೊಳ್ಳಬೇಕು. ಇದರಿಂದ ಮುಖದ ಮೇಲಿನ ಕೂದಲು ಮೃದುವಾಗುವುದು. ಅಲ್ಲದೆ ಶೇವ್‌ ಮಾಡುವಾಗ ನೋವು ಆಗುವುದಿಲ್ಲ.

ಸೂಕ್ಷ್ಮ ಚರ್ಮವಾಗಿದ್ದರೆ ಶೇವ್‌ ಮಾಡಿದ ಬಳಿಕ ನವೆ ಅಥವಾ ಗುಳ್ಳೆಗಳು ಏಳುವ ಸಾಧ್ಯತೆ ಇರುತ್ತದೆ. ಸೂಕ್ಷ್ಮ ಚರ್ಮದವರಾದರೆ ರಾತ್ರಿ ಮಲಗುವುದಕ್ಕೂ ಮುನ್ನ ಹರಳೆಣ್ಣೆಯನ್ನು ಗಡ್ಡದ ಸುತ್ತ ಹಚ್ಚಿಕೊಳ್ಳಬೇಕು. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಕೆಲವು ಸಮಸ್ಯೆಗೆ ಪರಿಹಾರ ಸಿಗುತ್ತದೆ.

Comments are closed.