ಉಡುಪಿ: ಕೊರೋನ ವೈರಸ್ ಭೀತಿಯಿಂದ ವ್ಯಕ್ತಿಯೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ನಡೆದಿದೆ.
ಉಪ್ಪೂರಿನ ನರ್ನಾಡು ನಿವಾಸಿ ಗೋಪಾಲಕೃಷ್ಣ ಮಡಿವಾಳ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
(ಸಾಂದರ್ಭಿಕ ಚಿತ್ರ)
ಕೆಎಸ್ಸಾರ್ಟಿಸಿ ಬಸ್ ನ ಟ್ರೈನರ್ ಆಗಿದ್ದ ಗೋಪಾಲಕೃಷ್ಣ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದುಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ತನ್ನ ಸ್ನೇಹಿತನಿಗೆ ಕೊರೊನಾ ಲಕ್ಷಣ ಕಂಡುಬಂದಿದೆ ಎಂದು ಮನೆಯವರಲ್ಲಿ ಹೇಳಿಕೊಂಡಿದ್ದರು. ಡೆತ್ ನೋಟ್ ನಲ್ಲಿ ನನಗೆ ಕೊರೊನಾ ತಗುಲಿರಬಹುದು ಎಂದು ಬರೆದಿಟ್ಟಿದ್ದರು. ಆದರೆ ಇವರಿಗೆ ಕೊರೊನಾದ ಯಾವುದೇ ಲಕ್ಷಣಗಳಿರಲಿಲ್ಲ ಕೇವಲ ಭೀತಿಯಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
Comments are closed.