ಕರಾವಳಿ

‘ಇದು ಸೀಲ್ ಡೌನ್ ಅಲ್ಲ’-ಕೋವಿಡ್ ಟಾಸ್ಕ್ ಫೋರ್ಸ್ ಮೂಲಕ ಅಗತ್ಯವಿರುವರಿಗೆ ಹೋಮ್ ಡೆಲಿವರಿ ಸೇವೆ!

Pinterest LinkedIn Tumblr

ಕುಂದಾಪುರ: ಲಾಕ್ಡೌನ್ ಅವಧಿಯಲ್ಲಿ ಜನರ ಓಡಾಟ ಕಡಿಮೆಗೊಳಿಸಲು ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಹೊರಡಿಸಿರುವ ಕೋವಿಡ್ ಟಾಸ್ಕ್ ಫೋರ್ಸ್ ನೂತನ ಅಧಿಸೂಚನೆಯಿಂದ ಸಾರ್ವಜನಿಕರು ಗೊಂದಲಕ್ಕೊಳಗಾದ ಬೆನ್ನಲ್ಲೇ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸೋಮವಾರ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಟಾಸ್ಕ್ ಫೋರ್ಸ್ ಕುರಿತು ಸಾರ್ವಜನಿಕರು ಯಾವುದೇ ರೀತಿಯಲ್ಲಿ ಗೊಂದಲಕ್ಕೊಳಗಾಗುವುದು ಬೇಡ. ಈಗಿರುವ ವಿಧಾನಕ್ಕೆ ಇದೊಂದು ಹೊಸ ಸೇರ್ಪಡೆ ಅಷ್ಟೆ. ಅಗತ್ಯವಿರುವವರು ಇದನ್ನು ಬಳಸಿಕೊಳ್ಳಬಹುದು. ಅಗತ್ಯವಿಲ್ಲದವರು ನೇರವಾಗಿ ನಿಗದಿತ ಸಮಯದೊಳಗೆ ಅಂಗಡಿಗಳಿಗೆ ಹೋಗಿ ದಿನಸಿಯನ್ನು ಖರೀದಿಸಬಹುದು. ಎಂದಿನಂತೆ ದಿನಸಿ ಅಂಗಡಿಗಳು ಬೆಳಿಗ್ಗೆ 7ರಿಂದ11 ಗಂಟೆಯ ತನಕ ತೆರೆದಿರುತ್ತದೆ. ಈ ಸಮಯದಲ್ಲಿ ವಾಹನಗಳು ಹಾಗೂ ಜನರ ಓಡಾಟಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ಕೈಗೊತ್ತಿಕೊಂಡಿದ್ದೇವೆ ಎಂದರು. ಜಿಲ್ಲಾ ಪಂಚಾಯತ್ ಸಿಎಒ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ರಾಜು, ನಾನು ಜೊತೆಗೂಡಿ ಚಚರ್ೆ ನಡೆಸಿ ಈ ತೀರ್ಮಾನಕ್ಕೆ ಮುಂದಾಗಿದ್ದೇವೆ. ಉಪವಿಭಾಗದ 64 ಪಿಡಿಓಗಳು, ಇಬ್ಬರು ತಾ.ಪಂ ಇಓ ಟಾಸ್ಕ್ಫೋಸರ್್ ತಂಡದ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರನ್ನು ಸ್ವಯಂ ಸೇವಕರಾಗಿ ನೇಮಕ ಮಾಡಲಾಗಿದೆ ಎನ್ನುವ ಆರೋಪಗಳಿಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೂ ದೂರು ಬಂದಿದೆ. ಯಾವುದೇ ಯೋಜನೆಗಳು ಕಾರ್ಯರೂಪಗೊಳಿಸುವಾಗ ಸಮಸ್ಯೆ ಎದುರಾಗುವುದು ಸಾಮನ್ಯ. ಪ್ರತೀ ಗ್ರಾಮದ ವಾರ್ಡ್ ಗಳಲ್ಲಿ ಇಬ್ಬರು ಸ್ವಯಂಸೇವಕರನ್ನು ಆಯಾ ಗ್ರಾ.ಪಂ ಪಿಡಿಓಗಳೇ ನೇಮಕ ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಒಂದುವೇಳೆ ಇಂತಹ ಘಟನೆಗಳು ನಡೆದರೆ ಜಿ.ಪಂ ಸಿಇಓ, ಎಸಿ ಜೊತೆಗೂಡಿ ಚರ್ಚೆ ನಡೆಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದ ಅವರು, ಸ್ವಯಂಸೇವಕರ ತಂಡವನ್ನು ಆಯಾ ಗ್ರಾ.ಪಂ ಪಿಡಿಓಗಳೇ ನಿರ್ವಹಣೆ ಮಾಡುತ್ತಾರೆ. 7ರಿಂದ 11 ಗಂಟೆಯೊಳಗೆ ಈ ತಂಡ ವಾರಕ್ಕೆ ಬೇಕಾಗುವಂತಹ ದಿನಸಿಗಳನ್ನು ಖರೀದಿಸಿ ಆ ಬಳಿಕ ಮನೆ ಮನೆ ತಲುಪಿಸುವ ಕಾರ್ಯ ಮಾಡಲಿದೆ ಎಂದರು.

Comments are closed.