ಕರಾವಳಿ

ಉಡುಪಿಯ ರಸ್ತೆಯಲ್ಲಿ ನೋಟು ಎಸೆದು ಹೋದ ಯುವಕ!

Pinterest LinkedIn Tumblr

ಉಡುಪಿ: ಇಲ್ಲಿನ ವಾದಿರಾಜ ರಸ್ತೆಯಲ್ಲಿ ಯವಕನೋರ್ವ ನೋಟಿನ‌ ಕಂತೆ ಹರಡಿ ಕೆಲ ಕಾಲ ಆತಂಕ ಸ್ರಷ್ಟಿಸಿದ ಘಟನೆ ಸೋಮವಾರ ನಡೆದಿದೆ.

(ಸಾಂದರ್ಭಿಕ ಚಿತ್ರ)

ಸೋಮವಾರ ಯುವಕನೋರ್ವ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನ ಚೆಲ್ಲಿದ್ದಾನೆ. ಎರಡು ಸಾವಿರ, ಐನೂರು ಹಾಗೂ ಇನ್ನೂರರ ನೋಟುಗಳನ್ನ‌ ನಡೆದುಕೊಂಡು ಹೋಗುತ್ತಿದ್ದಂತೆ ಚೆಲ್ಲಿದ್ದಾನೆ. ಇದನ್ನು ಕಂಡ ಜನತೆಯೂ ನೋಟು ಹೆಕ್ಕಲು ಮುಗಿಬಿದ್ದಿದ್ದಾರೆ. ಆದರೆ ಈ ನೋಟುಗಳೆಲ್ಲವೂ ನಕಲಿ ನೋಟುಗಳಾಗಿದ್ದವು. ಅವುಗಳೆಲ್ಲಾ ಜೆರಾಕ್ಸ್ ಮಾಡಲಾದ ನೋಟುಗಳು ಎಂದು ತಿಳಿದುಬಂದಿದೆ.

ವಿಷಯ ತಿಳಿದ ಜನ ,ಕೂಡಲೇ ಯುವಕನನ್ನು ಹಿಡಿಯಲು ಯತ್ನಿಸಿದ್ದಾರೆ.‌ ಅದರೆ ಯುವಕ ಪರಾರಿಯಾಗಿದ್ದಾನೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮಧುಕರ್ ಮುದ್ರಾಡಿ ಎಲ್ಲಾ ನಕಲಿ ನೋಟುಗಳನ್ನ ಸಂಗ್ರಹಿಸಿ ನಗರ ಠಾಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನಲ್ಲಿ ಬಳಿ ಎರಡಕ್ಕಿಂತಲೂ ಹೆಚ್ಚು‌ ನೋಟಿನ ಬಂಡಲ್ ಇದ್ದವು ಎನ್ನಲಾಗಿದೆ.

ಮಹಾಮಾರಿ ಕೋವಿಡ್ -19 ವೈರಸ್ ನೋಟುಗಳ‌ ಮೂಲಕ ಹರಿಯಬಿಡುತ್ತಿರುವ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲಿ ಕಂಡಿದ್ದ ಜನ ,ಇದೀಗ ಭಯಪಟ್ಟಿದ್ದಾರೆ. ದುಷ್ಕರ್ಮಿಗಳು ನೋಟುಗಳ ಮೂಲಕ ಜನರನ್ನ ಭಯ ಪಡಿಸುವ ಯತ್ನ‌ಇದಾಗಿರಬಹುದೆಂದು ಮಧುಕರ್ ಮುದ್ರಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರೋನಾ ಖಾಯಿಲೆ ಸಂಬಂಧ ಉಡುಪಿನಗರ ಬಂದ್ ಆಗಿರುವುದನ್ನು ನೋಡಿ ನೋಟುಗಳನ್ನು ಬಿಸಾಡಿದರೆ ಹಣದ ಆಸೆಗಾಗಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅವುಗಳನ್ನು ಆರಿಸಲು ಬರುತ್ತಾರೆ ಹಾಗೂ ಇದರಿಂದ ಕರೋನಾ ಖಾಯಿಲೆ ಹರಡಬಹುದು ಎಂಬ ದುರುದ್ದೇಶದಿಂದ ಈ ರೀತಿ ಮಾಡಿರುವ ಸಂಶಯ ಮೂಡಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಐಪಿಸಿ ಕಲಂ 270 ರಂತೆ ಪ್ರಕರಣ ದಾಖಲಾಗಿದೆ.

Comments are closed.