ಕಾರವಾರ: ರಂಜಾನ್ ತಿಂಗಳಿನಲ್ಲಿ ಮುಸ್ಲಿಮರು ಕೊರೊನಾ ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಬೇಕೆಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಶುಕ್ರವಾರ ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದ ಪ್ರಮುಖರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಮುಸ್ಲಿಮರು ಪ್ರಾರ್ಥನೆ ಇಫ್ತಾರ್ ಕೂಟಕ್ಕೆ ಗುಂಪು ಸೇರಬಾರದು. ವಕ್ಫ್ ಮಂಡಳಿ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು, ಈಗಾಗಲೇ ನೀಡಿರುವ ಸೂಚನೆಗಳು ಬದಲಾವಣೆಯಾದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ಅಧಿಕಾರಿಗಳು ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು, ಭಟ್ಕಳ ಬಿಟ್ಟು ಬೇರೆ ತಾಲೂಕುಗಳಲ್ಲಿ ಕೋವಿಡ್- 19 ಹರಡದಂತೆ ನೋಡಿಕೊಳ್ಳಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಈ ಸಂದರ್ಭದಲ್ಲಿ ಡಿಸಿ ಡಾ. ಹರೀಶಕುಮಾರ ಕೆ., ಎಸ್ ಪಿ ಶಿವಪ್ರಕಾಶ ದೇವರಾಜು, ಕಾರವಾರ ಎಸಿ ಪ್ರಿಯಾಂಕಾ ಎಂ. ಹಾಗೂ ಮುಸ್ಲಿಮ್ ಮುಖಂಡರು ಉಪಸ್ಥಿತರಿದ್ದರು.
Comments are closed.