ಉಡುಪಿ: ಕೊವಿಡ್-19 ಕೊರೊನಾ ವೈರಸ್ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಇದ್ದು ಮದ್ಯ ಮಾರಾಟ ಸ್ಥಗಿತಗೊಂಡಿದೆ. ಆದರೂ ಕೂಡ ಅಲ್ಲಲ್ಲಿ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ಹಾಗೂ ಕಳ್ಳಬಟ್ಟಿ ದಂಧೆಗಳು ನಡೆಯುತ್ತಿದೆ.
ಉಡುಪಿಯ ಶಿವಳ್ಳಿ ಎಂಬಲ್ಲಿ ಮನೆಯಲ್ಲಿ 5ಲೀಟರ್ ಕಳ್ಳಭಟ್ಟಿಯನ್ನು ಅಬಕಾರಿಯವರು ದಾಳಿ ನಡೆಸಿ ಪತ್ತಹಚ್ಚಿದ್ದಾರೆ. ಜೋಸೆಫ್ ಮಸ್ಕರೇನಸ್ ಎನ್ನುವಾತನ ಮನೆ ಮೇಲೆ ಈ ದಾಳಿ ನಡೆದಿದೆ
ಮಂಗಳೂರು ಅಬಕಾರಿ ಜಂಟಿ ಆಯುಕ್ತರ ಆದೇಶದಂತೆ ಉಡುಪಿ ಅಬಕಾರಿ ಉಪಾಯುಕ್ತ ನಾಗೇಶಕುಮಾರ ಡಿ ಇವರ ನಿರ್ದೇಶನದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಶುಭದಾ ಸಿ ನಾಯಕ್, ಸಿಬ್ಬಂದಿಗಳಾದ ಕೃಷ್ಣ, ದಿವಾಕರ, ದಿನೇಶ್ ಮೊದಲಾದವರು ಭಾಗವಹಿಸಿದ್ದರು.
Comments are closed.