ಕರಾವಳಿ

ಕೋವಿಡ್-19: ಸಿಎಂ ಪರಿಹಾರ ನಿಧಿಗೆ 1.25 ಸಾವಿರ ದೇಣಿಗೆ ನೀಡಿದ ಉಡುಪಿಯ ದಾನಿಗಳು

Pinterest LinkedIn Tumblr

ಉಡುಪಿ: ಕೋವಿಡ್-19 ಕೋರೋನ ವೈರಸ್ ಮಹಾಮಾರಿ ದೇಶಾದ್ಯಂತ ವ್ಯಾಪಕವಾಗಿ ಹರಡಿದ್ದು ಮನುಕುಲಕ್ಕೆ ಸಂಕಷ್ಟವನ್ನು ಉಂಟುಮಾಡಿದೆ. ಈ ನಿಟ್ಟಿನಲ್ಲಿ ಪರಿಹಾರ ಹಾಗೂ ಮುಂಜಾಗೃತ ಕ್ರಮಗಳು ಸಮರೋಪಾದಿಯಲ್ಲಿ ಸಾಗುತ್ತಿವೆ.

ಕೋರೋನ ವೈರಸ್ ಸಂಬಂಧಿಸಿದಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 1,25,000 ರೂಪಾಯಿ ಚೆಕ್ಕನ್ನು ದೇಣಿಗೆ ಯಾಗಿ ಅಮೃತ್ ಪಾಟೇಲ್, ಪುರುಷೋತ್ತಮ್ ಪಾಟೀಲ್ ಹಾಗೂ ಮನ್ಸುಕ್ ಪಾಟೀಲರವರು ಉಡುಪಿ ಶಾಸಕ ಕೆ. ರಘುಪತಿ ಭಟ್ ಇವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪಾಟಿದಾರ್ ಸಮಾಜ ಉಡುಪಿ ಇದರ ಅಧ್ಯಕ್ಷ ಸೋಮ್ಜಿ ಎಂ ಪಾಟೀಲ್ ಉಪಾಧ್ಯಕ್ಷ ವಸಂತ ಪಾಟೀಲ್ ಹಾಗೂ ಕಾರ್ಯದರ್ಶಿ ರತಿ ಲಾಲ್ ಪಾಟೀಲ್ ಉಪಸ್ಥಿತರಿದ್ದರು.

ಈ ಕೊಡುಗೆಗೆ ಶಾಸಕ ಕೆ. ರಘುಪತಿ ಭಟ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ವಿಶೇಷ ಅಭಿನಂದನೆಯನ್ನು ಸಲ್ಲಿಸಿದರು.

Comments are closed.