ಕರಾವಳಿ

ಉಡುಪಿ ಅಲೆಯೂರಿನ ಕೊಡಂಗಳ ನದಿ ಬಳಿ ಪಿಪಿಇ ಕಿಟ್ ಪತ್ತೆ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆ ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ಎಂಬಲ್ಲಿ ನದಿಯಲ್ಲಿ ಕೊರೋನಾ ಚಿಕಿತ್ಸೆಗೆ ವೈದ್ಯರು ಧರಿಸುವ ಪರ್ಸನಲ್ ಪ್ರೊಟೆಕ್ಷನ್ ಇಕ್ಯುಪ್ ಮೆಂಟ್ (ಪಿಪಿಇ) ಉಡುಪು ಮಂಗಳವಾರ ಪತ್ತೆಯಾಗಿದೆ ಎಂದು ಅಲೆವೂರು ಗ್ರಾಮಪಂಚಾಯತ್ ಪಿಡಿಓ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೀಗ ಈ ಪಿಪಿಇ ಕೊರೋನಾ ಚಿಕಿತ್ಸೆಯಲ್ಲಿ ಮಾತ್ರ ಬಳಸುವಂತದ್ದಾಗಿರುವುದರಿಂದ ಅಪಾಯಕಾರಿಯಾಗಿರುವ ಅದನ್ನು ಯಾವ ಆಸ್ಪತ್ರೆಯಲ್ಲಿ ಬಳಸಿದ್ದು, ಯಾರು ಅದನ್ನು ಇಲ್ಲಿಗೆ ತಂದು ಎಸೆದವರು ಮತ್ತು ಯಾವ ಉದ್ದೇಶದಿಂದ ಎಸೆಯಲಾಗಿದೆ ಎಂಬುದು ಮಾತ್ರ ನಿಗೂಢವಾಗಿದೆ.

ಈ ಬಗ್ಗೆ ಜಿಲ್ಲಾಡಳಿತ ಕೂಡ ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ತನಿಖೆ ನಡೆಯುತ್ತಿದೆ.

Comments are closed.