ಉಡುಪಿ: ಮುಂಬೈನಿಂದ ಕುಂದಾಪುರಕ್ಕೆ ಆಗಮಿಸಿ ಕ್ವಾರೆಂಟೈನ್’ನಲ್ಲಿದ್ದ ವ್ಯಕ್ತಿ ಮೃತಪಟ್ಟ ಕುರಿತು ಉಡುಪಿ ಡಿಸಿ ಜಿ. ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ವ್ಯಕ್ತಿಗೆ ಹೃದಯಾಘಾತವಾದ ತಕ್ಷಣ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆ.ಎಂ.ಸಿಗೆ ದಾಖಲಿಸಿದ್ದು ಅಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದರು. ಆದರೆ ತೀವೃ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಿಂದ ಅವರು ಬಂದಿರುವ ಕಾರಣ ಕೊರೋನಾ ಪರೀಕ್ಷೆ ಮಾಡಿಸಿದ್ದು ಅದರ ವರದಿ ಪಾಸಿಟಿವ್ ಬಂದಿದೆ. ಈ ವ್ಯಕ್ತಿಯೊಂದಿಗೆ ಟ್ರಾವೆಲ್ ಮಾಡಿದ ಐದು ಜನರನ್ನು ಮತ್ತು ಕೆ.ಎಂ.ಸಿ. ಸಿಬ್ಬಂದಿಗಳು ಮೂವರನ್ನು ಕ್ವಾರೆಂಟೈನ್ ಮಾಡಲಾಗುತ್ತದೆ. ಉಳಿದಂತೆ ಕುಂದಾಪುರ ಆಸ್ಪತ್ರೆ ಮತ್ತು ಕೆ.ಎಂ.ಸಿ ಆಸ್ಪತ್ರೆಯ ಎಲ್ಲಾ ವೈದ್ಯರು, ಸಿಬ್ಬಂದಿಗಳು ಪಿಪಿಇ ಕಿಟ್ ಬಳಸಿದ್ದಾರೆ. ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 57 ಮಂದಿಯನ್ನು ಗುರುತಿಸಲಾಗಿದೆ. ಸೆಕಂಡರಿ ಕಾಂಟೆಕ್ಟ್ 38 ಮಂದಿಯನ್ನು ಗುರುತಿಸಲಾಗಿದೆ. ಮೃತ ವ್ಯಕ್ತಿ ಸಂಸ್ಕಾರ ಕೋವಿಡ್ ನಿಯಮಾವಳಿ ಶಿಚ್ಟಾಚಾರದಂತೆ ನಡೆಯಲಿದೆ ಎಂದು ಅವರು ಹೇಳಿದರು.
Comments are closed.