ಕರಾವಳಿ

ಇಂದು ಅಂತರಾಷ್ಟಿಯ ಚೈಲ್ಡ್ ಹೆಲ್ಪ್ ಲೈನ್ ದಿನ: ಚೈಲ್ಡ್ ಲೈನ್ ಕಾರ್ಯ, ಸವಾಲುಗಳ ಬಗ್ಗೆ ಇಲ್ಲಿದೆ ನೋಡಿ..

Pinterest LinkedIn Tumblr

ಉಡುಪಿ: ಇಂದು ( ಮೇ 17 ರಂದು) ಪ್ರಪಂಚದಾದ್ಯಂತ ಮಕ್ಕಳ ಸಹಾಯವಾಣಿ ದಿನವನ್ನಾಗಿ ಆಚರಿಸಲಾಗುತ್ತಿದೆ. ದೌರ್ಜನ್ಯ ಮತ್ತು ಶೋಷಣೆಗೆಗೊಳಗಾದ ಮಕ್ಕಳ ಮೇಲೆ ತಮ್ಮ ಬದ್ಧತೆಯನ್ನು ಮತ್ತು ಮಕ್ಕಳ ಸುರಕ್ಷತೆಯಲ್ಲಿರುವ ಇತ್ಯಾದಿ ಎಲ್ಲಾ ಸಹಯೋಗ ಸಂಸ್ಥೆಗಳು ಮತ್ತು ಅಧಿಕಾರಿಗಳು ಈ ದಿನ ಪ್ರತಿಜ್ಞಾ ವಿಧಿಯನ್ನು ತೆಗೆದುಕೊಳ್ಳುವುದರ ಮೂಲಕ ಅದನ್ನು ಆಚರಿಸಲಾಗುತ್ತಿದೆ.

1989 ರಲ್ಲಿ ಮುಂಯಿಯ ಜಿರೋ ಬಿಲ್ಲಿ ಮೋರಿಯ ಎಂಬ ಸಮಾಜ ಸೇವಕಿ ಟಾಟಾ ಇನ್ಸ್ಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದು ಬೀದಿಬದಿಯ ಅಲೆಮಾರಿ ಮಕ್ಕಳ ಸಮಸ್ಯೆಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಿದರು. ತದನಂತರ ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಜಗತ್ತಿನ ಹೆಚ್ಚಿನ ದೇಶಗಳು ಒಪ್ಪಿ ಸಹಿ ಮಾಡಿದವು. ಅಂತೆಯೇ ಭಾರತ ಸರ್ಕಾರವು 1996 ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಚೈಲ್ಡ್ಲೈನ್-1098 ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಮೂಲಕ ದೇಶದಾದ್ಯಂತ ಪ್ರಾರಂಭಿಸಿತು.
ಚೈಲ್ಡ್ಲೈನ್ ಇಂಡಿಯಾ ಎಂಬ ಸ್ವಯಂಸೇವ ಸಂಸ್ಥೆಗೆ ಇದರ ಜವಬ್ದಾರಿಯನ್ನು ನೀಡಲಾಯಿತು.ಅದು ಪ್ರಸ್ತುತ 571 ಕೇಂದ್ರಗಳಲ್ಲಿ ವಿವಿಧ ಸೇವ ಸಂಸ್ಥೆಗಳ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಯೋಜಿಸಲ್ಪಟ್ಟ ಈ ಸಹಾಯವಾಣಿ 1098ರ ಮೂಲಕ 18 ವರ್ಷದೊಳಗಿನ ಮಕ್ಕಳ ಸಮಸ್ಯೆಗಳ ಬಗ್ಗೆ ದಿನದ 24 ಗಂಟೆಯು ಕರೆ ಮಾಡಿ ಸಹಾಯವನ್ನುಯಾಚಿಸಬಹುದು. ಚೈಲ್ಡ್ಲೈನ್1098 ತಂಡವು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಜಿಲ್ಲಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳು ಸಹಕಾರದಿಂದ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆ ತಡೆಯುವಲ್ಲಿ ಮನೆ, ಶಾಲೆಗಳಲ್ಲಿ ಸಮಾಜದಲ್ಲಿ ಮಕ್ಕಳ ಮೇಲಿನ ಲೈಂಗಿಕ ಮತ್ತು ಇತರ ದೌರ್ಜನ್ಯ ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಹಾಗೂ ಇತರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹರಿಸಲು ಸಹಕರಿಸುತ್ತಿದೆ.

ಉಡುಪಿಯಲ್ಲಿ 2019 ಮಾರ್ಚ್ ರಿಂದ ಕಾರ್ಯ ಆರಂಭಿಸಿದ ಚೈಲ್ಡ್ಲೈನ್ ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್, ಬಾಲನಿಕೇತನ ಕುಕ್ಕಿಕಟ್ಟೆ ಇಲ್ಲಿ ಕಾರ್ಯ ಆಚರಿಸುತ್ತಿದೆ. ಗತವರ್ಷದಲ್ಲಿ 367 ಪ್ರಕರಣಗಳು ವರದಿಯಾಗಿದ್ದು ಬಹುತೇಕ ಪ್ರಕರಣಗಳು ಯಶಸ್ವಿಯಾಗಿ ಪರಿಹರಿಸಲಾಗಿದೆ.ಜಿಲ್ಲೆಯ ಶಾಲಾ ಕಾಲೇಜುಗಳು,ಬಸ್ ಸ್ಟಾಂಡ್,ರಿಕ್ಷಾ ಸ್ಟಾಂಡ್,ಅಂಗಡಿ ,ಕೈಗಾರಿಕ ಪ್ರದೇಶಗಳು,ಕೊಳಚೆ ಪ್ರದೇಶಗಳು,ರೈಲ್ವೆ ಸ್ಟೇಶನ್ ಗಳಲ್ಲಿ ವಿವಿಧ ಸ್ವಸಹಾಯ ಸಂಘದ ಜನರಲ್ಲಿ ಮಕ್ಕಳ ಸಹಾಯವಾಣಿಯ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ.ತೆರೆದ ಮನೆ ಕಾರ್ಯಕ್ರಮಗಳ ಮೂಲಕ ಈ ಪ್ರದೇಶದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಮುಖಾಮುಖಿಯನ್ನಾಗಿಸಿ ಅದನ್ನು ಪರಿಹರಿಸುವಲ್ಲಿ ಸಹಕರಿಸಿದೆ.

ಕೇಂದ್ರಸರ್ಕಾರದ ಸ್ವಚ್ಛಭಾರತಮಿಷನ್ ಅಡಿಯಲ್ಲಿ ಚೈಲ್ಡ್ಲೈನ್ ಕೂಡ ಕೈ ಜೋಡಿಸಿದ್ದು ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಇತ್ತೀಚಿನ ಕೋರೊನಾ ವೈರಸ್‌ನ ಹಾವಳಿಯ ಬಗ್ಗೆ ತೆಗೆದು ಕೊಳ್ಳಬೇಕಾದ ಮುಂಜಾಗೃತೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಲಾಕ್ ಡೌನ್‌ನ ಈ ವಿಶೇಷ ಸಂದರ್ಭದಲ್ಲಿಯೂ ಕೂಡ ಚೈಲ್ಡ್ಲೈನ್ ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತಿದ್ದು ಮಕ್ಕಳ ಕರೆಗಳನ್ನು ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ.ಇತ್ತೀಚಿಗೆ ವಾಹನಗಳಲ್ಲಿ ದ್ವನಿವರ್ಧಕ ಕೋವಿಡ್-19 ರ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗೃತೆಗಳ ಬಗ್ಗೆ ಮತ್ತು ಮಕ್ಕಳ ಸಹಾಯವಾಣಿಯ ಬಗ್ಗೆ ಜಿಲ್ಲೆಯಾದ್ಯಂತ ಜಾಗ್ರತಿ ಮೂಡಿಸುವ ಕಾರ್ಯನಡೆಸಲಾಯಿತು.

ಪಟ್ಲದ ಹಾಸ್ಟೆಲ್ ನ ಪರಿಸರದಲ್ಲಿ ಸ್ವಚ್ಛತೆಯನ್ನು ರೋಟರಿ ಉಡುಪಿಯ ಸಹಕಾರದಿಂದ ಮಾಡಿದ್ದು ಅಲ್ಲಿಯ ಇತರ ಸಮಸ್ಯೆಗಳ ಅವ್ಯವಸ್ಥೆಗಳ ಬಗ್ಗೆ ಸಂಭಂಧಿಸಿದ ಅಧಿಕಾರಿಗಳ ಸಹಕಾರದಿಂದ ಪರಿಹರಿಸಿದ್ದು ಅಭಿಮಾನ ಮೂಡಿಸಿದೆ.ಆದಿಉಡುಪಿಯ ಕೊಳಚೆಗೇರಿಯಲ್ಲಿ ವಿದ್ಯುತ್‌ದೀಪ ಸಮಸ್ಯೆಗಳ ಬಗ್ಗೆ ,ಇಂದ್ರಾಣಿ ನದಿ ಕೊಳಚೆಯಿಂದಾಗುವ ಮಕ್ಕಳ ಸಮಸ್ಯೆಗಳ ಬಗ್ಗೆ ಸಂಬಂಧಿತರ ಗಮನ ಸೆಳೆಯವ ಕಾರ್ಯಮಾಡಲಾಗಿದೆ.

ಸವಾಲುಗಳು
 ಉಡುಪಿಯ ಶ್ರೀ ಕೃಷ್ಣ ಮಠ, ಬಸ್‌ಸ್ಟಾö್ಯಂಡ್, ಮಣಿಪಾಲ ಬಸ್ ಸ್ಟಾö್ಯಂಡ್‌ಗಳು ಜಿಲ್ಲೆಯ ಬೇರೆ ಬೇರೆ ಕೇಂದ್ರಗಳಲ್ಲಿ ಭಿಕ್ಷಾಟನೆ ನಿರತರಾಗಿರುವ ಮಕ್ಕಳ ಬಗ್ಗೆ ದೂರುಗಳು ಬಂದಿದ್ದು ಹಾಗೂ ಅ ಬಗ್ಗೆ ಜಿಲ್ಲಾಡಳಿತದ ಸಹಕಾರದಿಂದ ಕಾರ್ಯಚರಣೆ ಮಾಡಿದ್ದರು ಆದರು ಇದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿಲ್ಲ.
 ನಿಟ್ಟೂರು ಪರಿಸರದಲ್ಲಿ ಅಲೆಮಾರಿ ಜನಾಂಗದವರು ಬೀಡುಬಿಟ್ಟಿದ್ದು ಅವರು ಬಿಕ್ಷಾಟನೆ ಮತ್ತಿತ್ತರ ಕಾರ್ಯಗಳಲ್ಲಿ ತೊಡಗಿದ್ದು ಅಲ್ಲಿಯೂ ಕೆಲವು ಸಲ ಕಾರ್ಯಚರಣೆ ಮಾಡಿದ್ದು ಅದನ್ನು ಸಂಪೂರ್ಣವಾಗಿ ಹೊಗಲಾಡಿಸಲಾಗಿಲ್ಲ.
 ಮಲ್ಪೆಯ ಮೀನುಗಾರಿಕ ಬಂದರಿನಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದು ಕೆಲವು ಕಾರ್ಯಚರಣೆಗಳ ಮೂಲಕ ಬಗೆಹರಿಸಲಾಗದಿರುವುದು ವಿಷಾಧನೀಯ.
ಬರುವ ವರ್ಷಗಳಲ್ಲಿ ಇನ್ನಷ್ಟು ವಿವಿಧ ಕಾರ್ಯ ಸೂಚಿಗಳ ಮೂಲಕ ಸಂಭAಧಿಸಿದ ಅಧಿಕಾರಿಗಳ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಶೋಷಣೆ ತಡೆಯುವಲ್ಲಿ ನಮ್ಮ ಬದ್ಧತೆಯನ್ನು ಈ ಸಂದರ್ಭದಲ್ಲಿ ಚೈಲ್ಡ್ಲೈನ್‌ನಿಂದ ನೀಡಲು ಸಂತೋಷಪಡುತ್ತಿದೆ.

Comments are closed.