ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ

Pinterest LinkedIn Tumblr

ಉಡುಪಿ: ಭಾರತೀಯ ಹವಾಮಾನ ಇಲಾಖೆಯಿಂದ ಮೇ 29 ರಂದು ಅರಬಿ ಸಮುದ್ರದ ಪಶ್ಚಿಮ ಮತ್ತು ನೈಋತ್ಯ ಕೇಂದ್ರ ಭಾಗದ ಸುತ್ತಮುತ್ತ ಹಾಗೂ ಮೇ 31ರಂದು ಸಮುದ್ರದ ಆಗ್ನೇಯ ಭಾಗದ ಸುತ್ತಮುತ್ತ ವಾಯುಭಾರ ಕುಸಿತ ಉಂಟಾಗುವ ಸಂಭವವಿರುವುದಾಗಿ ಮಾಹಿತಿ ಲಭಿಸಿದ್ದು, ಇದರಿಂದ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಭಾರತ ಸರಕಾರದ ಹವಾಮಾನ ಇಲಾಖೆ, ತಿರುವನಂತಪುರಂ ಹವಾಮಾನ ಕೇಂದ್ರದಿಂದ ಪಡೆದ ಅಧಿಕೃತ ಮಾಹಿತಿಯಂತೆ ಅರಬಿಸಮುದ್ರದ ದಕ್ಷಿಣ- ಪೂರ್ವ ಭಾಗ ಮತ್ತು ಪೂರ್ವ-ಮಧ್ಯಭಾಗದ ವ್ಯಾಪ್ತಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿ ಇರುತ್ತದೆ. ಆದುದರಿಂದ ಮೇ 31ರಿಂದ ಜೂನ್ 4ರವರೆಗೆ ಮೀನುಗಾರರು ಆಳಸಮುದ್ರ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಸಲಾಗಿದೆ.

Comments are closed.