ಕುಂದಾಪುರ: ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಿಂದ ಆಗಮಿಸಿ ಕೊಲ್ಲೂರು ಕ್ವಾರಂಟೈನ್‌ನಲ್ಲಿದ್ದು ಬಳಿಕ ತನ್ನ ಪತ್ನಿಯ ಮನೆ ಕುಂದಾಪುರ ತಾಲೂಕಿನ ಕುಂಭಾಸಿ ಸಮೀಪದ ಕುಂಭಾಸಿ ಓಣಿಮನೆ ಎಂಬಲ್ಲಿಗೆ ಬಂದ ಕಿರಿಮಂಜೇಶ್ವರ ಮೂಲದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆ ಕುಂಭಾಸಿ ಗ್ರಾಮ ಪಂಚಾಯತ್ ವಾಪ್ತಿಯ ಕುಂಭಾಸಿ ಓಣಿಮನೆ ಅವರ ನಿವಾಸವನ್ನು ಸೀಲ್‌ಡೌನ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೋಭಾ, ಕುಂಭಾಸಿ ಗ್ರಾಮ ಪಂಚಾಯತ್ ಪಿಡಿಒ ಜಯರಾಮ ಶೆಟ್ಟಿ, ಗ್ರಾಮ ಲೆಕ್ಕಿಗ ಅನಿಲ್ ಕುಮಾರ್, ಪೊಲೀಸ್ ಸಿಬಂದಿ ವೀರಪ್ಪ , ಆರೋಗ್ಯ ಸಹಾಯಕಿ ಜ್ಯೋತಿ, ಆಶಾ ಕಾರ್ಯಕರ್ತೆಯರಾದ ಸುಹಾಸಿನಿ ಶೆಟ್ಟಿ ಮಲ್ಯಾಡಿ, ಗುಲಾಬಿ, ಶಾರದಾ ಮತ್ತಿತರರು ಉಪಸ್ಥಿತರಿದ್ದರು.
Comments are closed.