ಕರಾವಳಿ

ಮುಂಬಾಯಿಯ ಹಿರಿಯ ರಾಜಕಾರಿಣಿ ಲಕ್ಷ್ಮಣ್ ಸಿ ಪೂಜಾರಿಯವರಿಂದ ಚಿತ್ರಾಪು ಸ್ಮಶಾನಭೂಮಿಗೆ ಸ್ಟೀಲ್ ಶವಪಲ್ಲಕ್ಕಿ ದಾನ

Pinterest LinkedIn Tumblr

ಮಂಗಳೂರು / ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಚಿತ್ರಾಪು ಇಲ್ಲಿನ ಸ್ಮಶಾನಭೂಮಿಗೆ ಮುಂಬಯಿಯ ಎನ್ ಸಿ ಪಿ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಹಿರಿಯ ರಾಜಕಾರಿಣಿ ಲಕ್ಷ್ಮಣ್ ಸಿ ಪೂಜಾರಿ ಚಿತ್ರಾಪು ಇವರು ಆಧುನಿಕ ಸ್ಟೀಲ್ ಶವಪಲ್ಲಕ್ಕಿ ಯನ್ನು ದಾನ ಮಾಡಿರುವರು.

ಕೆಲವು ವರ್ಷಗಳ ಹಿಂದೆ ಕೊಡಲಾಗಿದ್ದ ಹಲಸಿನ ಮರದ ಶವಪಲ್ಲಕ್ಕಿಯು ಇದೀಗ ಹಳೆಯದಾಗಿದ್ದು ಇತ್ತೀಚೆಗೆ ತಮ್ಮ ಹಿರಿಯರಾದ ವೆಂಕು ಬಾಲು ಪೂಜಾರಿ ಚಿತ್ರಾಪು ಇವರ ಸ್ಮರಣಾರ್ಥವಾಗಿ ಸ್ಟೀಲ್ ಶವಪಲ್ಲಕ್ಕಿ ಯನ್ನು ಲಕ್ಷ್ಮಣ್ ಸಿ ಪೂಜಾರಿಯವರ ಅನುಪಸ್ಥಿತಿಯಲ್ಲಿ ಅವರ ಕುಟುಂಬಸ್ಥರು ಸ್ಮಶಾನಭೂಮಿಗೆ ನೀಡಿದರು.

ಈ ಸಂದರ್ಭದಲ್ಲಿ ಚಿತ್ರಾಪು ಬಿಲ್ಲವ ಸಂಘ ಮುಂಬಯಿ ಸಂಚಾಲಿತ ಶ್ರೀ ವಿಠೋಬಾ ಬಾಲಲೀಲಾ ಭಜನಾ ಮಂದಿರ ಚಿತ್ರಾಪು ಇದರ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಲಕ್ಷ್ಮಣ್ ಸಿ ಪೂಜಾರಿ ಚಿತ್ರಾಪು

ಜಾತಿ ಮತ ಬೇಧವಿಲ್ಲದೆ ಚಿತ್ರಾಪು ಪರಿಸರದಲ್ಲಿ ಮೃತ್ಯುವಶರಾದವರ ಪಾರ್ಥಿವ ಶರೀರವನ್ನು ರವಾನಿಸಿ ಶವ ಸಂಸ್ಕಾರಕ್ಕೆ ಅನುಕೂಲವಾಗುವಂತೆ ಇದನ್ನು ಉಪಯೋಗಿಸಲಾಗುವುದು ಎಂದು ಲಕ್ಷ್ಮಣ್ ಸಿ ಪೂಜಾರಿಯವರು ತಿಳಿಸಿದ್ದಾರೆ.

ವರದಿ : ಈಶ್ವರ ಎಂ. ಐಲ್

Comments are closed.