ಕರಾವಳಿ

ಬೈಂದೂರಿನ ಲಾಡ್ಜ್ ರೂಮಿನಲ್ಲಿ ಗಾಂಜಾ ಸಹಿತ ಐವರು ಆರೋಪಿಗಳ ಬಂಧನ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ ಎಂಬಲ್ಲಿನ ಲಾಡ್ಜ್ ಒಂದರಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ದಾಳಿ ನಡೆಸಿದ ಬೈಂದೂರು ಸರ್ಕಲ್ ಇನ್ಸ್’ಪೆಕ್ಟರ್ ಹಾಗೂ ತಂಡದವರು ಗಾಂಜಾ ಹಾಗೂ ಐದು ಜನ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಬ್ರಹ್ಮಾವರದ ಮಟಪಾಡಿ ನಿವಾಸಿ ಯೋಗೇಶ್ ಗಾಣಿಗ(24), ಕೇರಳ ತಿರುವನಂತಪುರಂ ನಿವಾಸಿ ಯದುನಾರಾಯಣ(21), ಬೈಂದೂರು ಬಿಜೂರು ಕಬ್ಸೆ ಕಂಚಿಕಾನ್ ನಿವಾಸಿ ಗುರುರಾಜ್ ಪೂಜಾರಿ(25), ಉಪ್ಪುಂದ ನಿವಾಸಿ ಸುನಿಲ್ ಪೂಜಾರಿ(26) ಮತ್ತು ಬಿಜೂರು ನಿವಾಸಿ ರವಿ(25) ಬಂಧಿತ ಆರೋಪಿಗಳು.

ಬೈಂದೂರು ಪೊಲಿಸ್ ವೃತ್ತ ನಿರೀಕ್ಷಕ ಸುರೇಶ್ ಜಿ. ನಾಯಕ್ ಅವರಿಗೆ ದೊರಕಿದ ಅಧಿಕೃತ ಮಾಹಿತಿಯಂತೆ ಉಪ್ಪುಂದದ ಪರಿಚಯ ಹೋಟೆಲ್ ನ ಸಮೃದ್ಧಿ ಲಾಡ್ಜಿಗೆ ದಾಳಿ ನಡೆಸಿದ್ದು 113 ನಂಬರ್ ಸಂಖ್ಯೆಯ ರೂಂಮಿನೊಳಗೆ ಗಾಂಜಾ ಸೇವಿಸುತ್ತಿದ್ದುದು ಪತ್ತೆಯಾಗಿದೆ. ಅಲ್ಲದೇ ಆರೋಪಿ ಯೋಗೇಶ್ ಗಾಣಿಗ ಎಂಬಾತನ ಬ್ಯಾಗಿನಲ್ಲಿ 40 ಗ್ರಾಂ ಗಾಂಜಾ ಪತ್ತೆಯಾಗಿದೆ. ದಾಳಿ ಸಂದರ್ಭ ಆರೋಪಿಗಳಿಗೆ ಭಟ್ಕಳ ಮೂಲದ ಶಬೀರ್ ಎಂಬಾತ ಗಾಂಜಾ ಸರಬರಾಜು ಮಾಡುತ್ತಿದ್ದ ಎನ್ನುವುದು ತಿಳಿದು ಬಂದಿದೆ. ಬ್ಯಾಗಿನಲ್ಲಿ ಗಾಂಜಾ ಸೇವಿಸಲು ಬಳಸುವ ಒಸಿಬಿ ಸ್ಲಿಮ್ ಪ್ರೀಮಿಯಂ ಎನ್ನುವ ಕಾಗದದ ಚೂರುಗಳು ಪತ್ತೆಯಾಗಿವೆ.ಆರೋಪಿತರಿಂದ ಮೊಬೈಲ್ ಫೋನು, 3 ದ್ವಿಚಕ್ರ ವಾಹನಗಳು ಸೇರಿದಂತೆ ರೂ. 1,71,500.00 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.