ಕರಾವಳಿ

ನೀಲಾವರ ಗೋ ಶಾಲೆಗೆ ಮೇವು ನೀಡಿದ ಬೈಂದೂರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ

Pinterest LinkedIn Tumblr

ಉಡುಪಿ: ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಗೋಗ್ರಾಸ ಅಭಿಯಾನದ ಅಂಗವಾಗಿ ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಬುಧವಾರ ನೀಲಾವರ ಗೋಶಾಲೆಗೆ ಮೇವನ್ನು ನೀಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಂದ್ರ ಪಣಿಯೂರ್ ,ಬೈಂದೂರು ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸಂತೋಷ್ ಪೂಜಾರಿ ಕರ್ಕುಂಜೆ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ದೇವಾಡಿಗ ಹೇರಂಜಾಲು, ಉಪಾಧ್ಯಕ್ಷರುಗಳಾದ ಚಂದ್ರ ಜೋಗಿ ಶಾನ್ಕಟ್ಟು, ಹರ್ಷ ಸಿದ್ದಾಪುರ, ಕಾರ್ಯಕಾರಿಣಿ ಸದಸ್ಯರುಗಳಾದ ವಿಜಯ್ ಮಡಿವಾಳ ಯಡಮಕ್ಕಿ ಶಂಕರನಾರಾಯಣ ಹಾಗೂ ಮಹೇಶ್ ಪೂಜಾರಿ ಸೌಕೂರು ಉಪಸ್ಥಿತರಿದ್ದರು.

Comments are closed.