ಉಡುಪಿ: ಉಡುಪಿ ಶಾಸಕ ರಘಪತಿ ಭಟ್ ಅವರಿಗೆ ಕೋವಿಡ್ ಸೊಂಕು ಧೃಡಪಟ್ಟಿದೆ. ತಮ್ಮ ಟ್ವಿಟರ್ ಖಾತೆಯಲ್ಲಿ ತನಗೆ ಸೋಂಕು ದೃಢ ಪಟ್ಟ ಕುರಿತು ಶಾಸಕರು ಬರೆದುಕೊಂಡಿದ್ದಾರೆ.
ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ನಾನು ಆಸ್ಪತ್ರೆಗೆ ದಾಖಲಾಗಿರುತ್ತೇನೆ. ಚಿಕಿತ್ಸೆ ಕಾರಣ ಸ್ವಲ್ಪ ದಿನ ನಿಮ್ಮ ಕರೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಕ್ಷಮೆ ಇರಲಿ ಎಂದು ಹೇಳಿಕೊಂಡಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಒಳಗಾಗಿ ಜಾಗ್ರತೆ ವಹಿಸಿ ಎಂದಿದ್ದಾರೆ.
Comments are closed.